×
Ad

ಹೂ ಬೆಳೆಗಾರರಿಗೆ ಪರಿಹಾರ ಅರ್ಜಿ ಆಹ್ವಾನ

Update: 2020-05-16 21:35 IST

ಮಂಗಳೂರು, ಮೇ 16 : ಕೋವಿಡ್-19 ಹಿನ್ನೆಲೆಯಲ್ಲಿ ವಿಧಿಸಿದ ಲಾಕ್‌ಡೌನ್‌ನಿಂದ ಹೂವಿನ ಬೆಳೆಗಾರರಿಗೆ ಉಂಟಾದ ನಷ್ಠಕ್ಕೆ ಪರಿಹಾರ ನೀಡುವ ಸಲುವಾಗಿ ರಾಜ್ಯ ಸರಕಾರವು ಹೂವು ಬೆಳೆದಿರುವ ರೈತರಿಗೆ ಪ್ರತೀ ಹೆಕ್ಟೇರಿಗೆ (ಎರಡೂವರೆ ಎಕರೆ) ಗರಿಷ್ಠ 25,000 ರೂ.ಗಳಂತೆ ಪರಿಹಾರ ನೀಡಲು ಕಾರ್ಯಕ್ರಮ ಜಾರಿಗೆ ತಂದಿದೆ.

2019-20ನೇ ಸಾಲಿನಲ್ಲಿ ಕೈಗೊಂಡ ಬೆಳೆ ಸಮೀಕ್ಷೆ ದತ್ತಾಂಶಗಳ ಆಧಾರದಲ್ಲಿ ದಾಖಲಾದ ರೈತರಿಗೆ ಪರಿಹಾರ ನೀಡಲು ಕ್ರಮವಹಿಸಲಾ ಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯಾ ಗ್ರಾಪಂ ಕಚೇರಿಗಳಲ್ಲಿ ಬೆಳೆ ಸಮೀಕ್ಷಾ ದತ್ತಾಂಶದಂತೆ ಹೂವು ಬೆಳೆದಿರುವ ರೈತರ ವಿವರಗಳನ್ನು ಸಾರ್ವಜ ನಿಕರ ಅವಗಾಹನೆಗೆ ಪ್ರಕಟಪಡಿಸಲಾಗುತ್ತಿದೆ. ಈ ಪಟ್ಟಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಮೇ 23ರೊಳಗೆ ಬರಹ ಮೂಲಕ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಅಥವಾ ಆಯಾ ರೈತ ಸಂಪರ್ಕ ವ್ಯಾಪ್ತಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಸಲ್ಲಿಸಬೇಕು.

ಪಟ್ಟಿಯಲ್ಲಿ ಯಾವುದೇ ಕಾರಣಕ್ಕೆ ಬಿಟ್ಟು ಹೋದ ಹೂವಿನ ಬೆಳೆ ಕೈಗೊಂಡಿರುವ ಕೃಷಿಕರು ನಿಗದಿತ ನಮೂನೆಯಲ್ಲಿ ಹೂವು ಬೆಳೆ ಬೆಳೆದಿರುವ ಜಮೀನಿನ ಆರ್‌ಟಿಸಿಯೊಂದಿಗೆ ಆಧಾರ್ ಕಾರ್ಡ್, ಸ್ವಯಂ ದೃಢೀಕೃತ ಘೋಷಣಾ ಪ್ರಮಾಣ ಪತ್ರ, ರೈತರ ಬ್ಯಾಂಕ್ ಪಾಸ್‌ಪುಸ್ತಕದ ಜೆರಾಕ್ಸೃ್ ಪ್ರತಿಗಳನ್ನು ಸಲ್ಲಿಸಬೇಕು.

ಜಂಟಿ ಖಾತೆಯಾಗಿದ್ದಲ್ಲಿ ಅಥವಾ ಜಮೀನಿನ ಒಡೆತನ ಹೊಂದಿದವರು ಮರಣ ಹೊಂದಿರುವ ಸಂದರ್ಭ ಸೂಕ್ತ ದೃಢೀಕರಣಗಳೊಂದಿಗೆ ಅರ್ಜಿಯನ್ನು ಮೇ 26ರೊಳಗೆ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಅಥವಾ ಆಯಾ ರೈತ ಸಂಪರ್ಕ ವ್ಯಾಪ್ತಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಸಲ್ಲಿಸಬೇಕು.

ತಾಲೂಕು ಹಾಗೂ ಜಿಲ್ಲಾ ಸಮಿತಿಗಳಿಂದ ಅನುಮೋದಿತವಾದ ಎಲ್ಲಾ ಫಲಾನುಭವಿಗಳಿಗೆ ಹೂವಿನ ಬೆಳೆ ಆವರಿಸಿರುವ ಪ್ರದೇಶಕ್ಕೆ ಪ್ರತೀ ಸೆಂಟ್ಸ್‌ಗೆ 100 ರೂ.ನಂತೆ ಗರಿಷ್ಠ ಎರಡೂವರೆ ಎಕರೆಗೆ 25,000 ರೂ. ಗರಿಷ್ಠ ಪರಿಹಾರ ಧನವನ್ನು ಬೆಳೆಗಾರರ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸಂದಾಯ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News