ಸುಭಾಷ್‌ನಗರ: ಮನೆ ನಿರ್ಮಾಣಕ್ಕೆ ಚಾಲನೆ
Update: 2020-05-16 21:47 IST
ಮಂಗಳೂರು, ಮೇ 16: ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಮುನ್ನೂರು ಗ್ರಾಪಂ ವ್ಯಾಪ್ತಿಯ ಸುಭಾಷ್‌ನಗರ ಪರಿಸರದ ಆರ್ಥಿಕವಾಗಿ ಹಿಂದುಳಿದ ವಿಧವೆಯ ಮನೆ ನಿರ್ಮಾಣ ಕಾಮಗಾರಿಗೆ ವೇದಿಕೆಯ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಲಾಕ್‌ಡೌನ್ ಹಿನ್ನೆಲೆಯಲ್ಲಿ ಆಹಾರ ಸಾಮಾಗ್ರಿಗಳನ್ನು ವಿತರಿಸುವ ವೇಳೆ ಈ ಮನೆಯು ಬಹಳಷ್ಟು ನಾದುರಸ್ತಿ ಯಾಗಿದ್ದುದನ್ನು ಕಂಡು ದಾನಿಗಳ ಸಹಾಯದಿಂದ ಮನೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಮನೆಯ ಕಾಮಗಾರಿಯನ್ನು ಶೀಘ್ರ ಪೂರ್ತಿಗೊಳಿಸಿ ಹಸ್ತಾಂತರಿಸುವುದಾಗಿ ಹೇಳಿದರು.
ಆರ್.ಕೆ ಮದನಿ ಅಮ್ಮೆಂಬಳ ದುಆ ನೆರವೇರಿಸಿದರು. ವೇದಿಕೆಯ ದ.ಕ.ಜಿಲ್ಲಾ ಉಪಾಧ್ಯಕ್ಷ ಮುನೀರ್ ಅಸೈಗೋಳಿ, ಮುನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುರ್ರಹ್ಮಾನ್, ಸುಭಾಷ್ ನಗರ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್, ಖಜಾಂಚಿ ಇಸ್ಮಾಯೀಲ್, ಗುತ್ತಿಗೆದಾರ ಹಸನಬ್ಬ ಉಳ್ಳಾಲ್ ಉಪಸ್ಥಿತರಿದ್ದರು.