×
Ad

ಐಎಸ್‍ಟಿಇ ರಾಜ್ಯ ಮಟ್ಟದ ಕೋಡಿಂಗ್ ಸ್ಪರ್ಧೆ : ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗೆ ಪ್ರಥಮ ಸ್ಥಾನ

Update: 2020-05-16 21:56 IST

ಮಂಗಳೂರು : ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್‍ಜೆಇಸಿ) ಮೂರನೇ ವರ್ಷದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿ ವಿನ್‍ಸ್ಟನ್ ಸೆಬಾಸ್ಟಿಯನ್ ಪಾಯ್ಸ್ ಅವರು ಐಎಸ್‍ಟಿಇ ಕರ್ನಾಟಕ ವಿಭಾಗ ನಡೆಸಿದ ರಾಜ್ಯ ಮಟ್ಟದ ಆನ್‍ಲೈನ್ ಕೋಡಿಂಗ್ ಸ್ಪರ್ಧೆ 'ಡೀಬಗ್ ಯುವರ್ ಲಾಕ್‍ಡೌನ್' ಹ್ಯಾಕ್-2020 ಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಸಂಸ್ಥೆಗೆ ಹಿರಿಮೆಯನ್ನು ತಂದರು.

ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜ್ಯುಕೇಶನ್ (ಐಎಸ್‍ಟಿಇ)ಯ ಕರ್ನಾಟಕ ವಿಭಾಗವು  ಜನಪ್ರಿಯ ಆನ್‍ಲೈನ್ ಕೋಡಿಂಗ್ ವೇದಿಕೆಯಾದ ಹ್ಯಾಕರ್ ರ್ಯಾಂಕ್‍ನಲ್ಲಿ ಹಲವು ಸುತ್ತಿನ ಪ್ರೋಗ್ರಾಮಿಂಗ್ ಪರೀಕ್ಷೆಗಳನ್ನು ನಡೆಸುವ ಮೂಲಕ ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಆನ್‍ಲೈನ್‍ನಲ್ಲಿ ಆಯೋಜಿಸಿತ್ತು.  ವಿಭಾಗಗಳಲ್ಲಿ ನಡೆಸಲಾದ ಈ ಸ್ಪರ್ಧೆಯಲ್ಲಿ ಕರ್ನಾಟಕದ  500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 3ನೇ ಮತ್ತು 4ನೇ ವರ್ಷದ ಬಿಇ ವಿದ್ಯಾರ್ಥಿಗಳಿಗೆ ನಡೆಸಲಾದ ಸ್ಪರ್ಧೆಗಳಲ್ಲಿ ವಿನ್‍ಸ್ಟನ್ ಪ್ರಥಮ ಸ್ಥಾನ ಪಡೆದರು.

ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಈ ಸಾಧನೆಯ ಬಗ್ಗೆ ಹೆಮ್ಮೆಪಡುತ್ತಾ ವಿನ್‍ಸ್ಟನ್ ಅವರ ಅತ್ಯುತ್ತಮ ಪ್ರಯತ್ನಗಳನ್ನು ಅಭಿನಂದಿಸುತ್ತದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News