ದ.ಕ.ಜಿಲ್ಲೆಯಲ್ಲಿ 8 ಕಂಟೈನ್ಮೆಂಟ್ ಝೋನ್
Update: 2020-05-16 22:58 IST
ಮಂಗಳೂರು, ಮೇ 16: ದ.ಕ.ಜಿಲ್ಲೆಯಲ್ಲಿ ಕೊರೋನ ಸೋಂಕು ಪಾಸಿಟಿವ್ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಕಂಟೈನ್ಮೆಂಟ್ ಝೋನ್‌ಗಳ ಪೈಕಿ 8 ಇನ್ನೂ ನಿರ್ಬಂಧಿತ ವಲಯವಾಗಿ ಮುಂದುವರಿಯುತ್ತಿದೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮ, ಬಂಟ್ವಾಳ ತಾಲೂಕಿನ ಬಿ ಕಸಬಾ ಗ್ರಾಮ ಮತ್ತು ನರಿಕೊಂಬು ಗ್ರಾಮ, ಮಂಗಳೂರು ತಾಲೂಕಿನ ಪಡೀಲ್ ಫರ್ಸ್ಟ್ ನ್ಯೂರೋ, ಪದವು ಗ್ರಾಮದ ಕಕ್ಕ್ಕೆಬೆಟ್ಟು, ಬೋಳೂರು ಗ್ರಾಮ, ಸೋಮೇಶ್ವರ ಗ್ರಾಮದ ಪಿಲಾರು, ಇಡ್ಯ ಗ್ರಾಮದ ಗುಡ್ಡೆಕೊಪ್ಲ ಕಂಟೈನ್ಮೆಂಟ್ ಝೋನ್ ಆಗಿದೆ. ಈ ಝೋನ್ ವ್ಯಾಪ್ತಿಯಲ್ಲಿ 21 ಸೋಂಕಿತರಿದ್ದರು. ಆ ಪೈಕಿ 5 ಮಂದಿ ಮೃತಪಟ್ಟಿದ್ದಾರೆ. ಪ್ರತಿಯೊಂದು ಝೋನ್‌ಗೆ ಇನ್ಸಿಡೆಂಟ್ ಕಮಾಂಡರ್‌ಗಳನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.