ರಶ್ಯ: ಕೋವಿಡ್-19 ಸಾವಿನ ಸಂಖ್ಯೆಯಲ್ಲಿ ಏರಿಕೆ; ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ

Update: 2020-05-16 18:03 GMT

ಮಾಸ್ಕೋ (ರಶ್ಯ), ಮೇ 16: ರಶ್ಯದಲ್ಲಿ ಒಂದು ದಿನದ ಕೊರೋನ ವೈರಸ್ ಸಾವಿನ ಸಂಖ್ಯೆಯಲ್ಲಿ ಶನಿವಾರ ಭಾರೀ ಹೆಚ್ಚಳವಾಗಿದೆ. ಆದರೆ, ಅದೇ ವೇಳೆ ದಿನದ ಹೊಸ ಸೋಂಕು ಪ್ರಕರಣಗಳಲ್ಲಿ ಇಳಿಕೆಯಾಗಿದೆ.

ರಶ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸಾಂಕ್ರಾಮಿಕದಿಂದಾಗಿ 119 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆ 2,537ಕ್ಕೆ ಏರಿದೆ ಎಂದು ರಶ್ಯ ಸರಕಾರದ ವೈರಸ್ ನಿರ್ವಹಣಾ ಕೇಂದ್ರ ನೀಡಿರುವ ಮಾಹಿತಿ ತಿಳಿಸಿದೆ. ಅದೇ ವೇಳೆ, ದಿನದಲ್ಲಿ ಸುಮಾರು 9,200 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಇದು ಮೇ 1ರ ಬಳಿಕ ವರದಿಯಾದ ಕನಿಷ್ಠ ದೈನಂದಿನ ಸೋಂಕು ಪ್ರಕರಣಗಳಾಗಿವೆ.

ಇದರೊಂದಿಗೆ ದೇಶದಲ್ಲಿ ವರದಿಯಾಗಿರುವ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 2,72,043ಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News