ವಲಸೆ ಕಾರ್ಮಿಕರಿಗೆ ಕಾಂಗ್ರೆಸ್ ನಿಂದ 1,000 ಬಸ್ ಗಳು: ಪ್ರಿಯಾಂಕ ಗಾಂಧಿ ಮನವಿಗೆ ಸ್ಪಂದಿಸಿದ ಆದಿತ್ಯನಾಥ್

Update: 2020-05-18 11:45 GMT

ಹೊಸದಿಲ್ಲಿ: ವಲಸಿಗ ಕಾರ್ಮಿಕರಿಗಾಗಿ 1,000 ಬಸ್ಸುಗಳನ್ನು ಓಡಿಸಲು ಅನುಮತಿ ನೀಡುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾಡಿದ ಮನವಿಗೆ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರ ಒಪ್ಪಿದೆ. ಬಸ್ಸುಗಳ ಮಾಹಿತಿ, ಅವುಗಳ ನೋಂದಣಿ ಸಂಖ್ಯೆ, ಚಾಲಕರ ಹೆಸರು ಮತ್ತಿತರ ವಿವರಗಳನ್ನು ಕಳುಹಿಸಿಕೊಡುವಂತೆ ರಾಜ್ಯ ಸರಕಾರ ಪ್ರಿಯಾಂಕ ಗಾಂಧಿ ವಾದ್ರಾ ಅವರ ಕಚೇರಿಗೆ ಪತ್ರ ಬರೆದಿದೆ.

ಮೇ 16ರಂದು ವೀಡಿಯೋ ಸಂದೇಶವೊಂದರ ಮೂಲಕ ಪ್ರಿಯಾಂಕ ಅವರು ಸಿಎಂಗೆ ಮನವಿ ಮಾಡಿದ್ದರು. ಉತ್ತರ ಪ್ರದೇಶದ ಔರಯ್ಯಾ ಎಂಬಲ್ಲಿ ವಲಸಿಗ ಕಾರ್ಮಿಕರಿದ್ದ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 24 ಕಾರ್ಮಿಕರು ಮೃತರಾಗಿ 36 ಮಂದಿ ಇತರರು ಗಾಯಗೊಂಡ ಘಟನೆಯ ಮರುದಿನ ಅವರು ತಮ್ಮ ಅಪೀಲಿನ ಕುರಿತಾಗಿ ಟ್ವೀಟ್ ಮಾಡಿದ್ದರು.

“ಮುಖ್ಯಮಂತ್ರಿಯವರೇ,  ನಿಮಗೆ ನನ್ನ ಮನವಿ, ಇದು ರಾಜಕಾರಣದ ಸಮಯವಲ್ಲ. ನಮ್ಮ ಬಸ್ಸುಗಳು ಗಡಿಯಲ್ಲಿ ನಿಂತಿವೆ. ಸಾವಿರಾರು ವಲಸಿಗ ಕಾರ್ಮಿರಕು ಅನ್ನಾಹಾರವಿಲ್ಲದೆ ತಮ್ಮ ಮನೆಗಳತ್ತ ನಡೆದುಕೊಂಡು ಹೋಗುತ್ತಿದ್ದಾರೆ. ಅವರಿಗೆ ಸಹಾಯ ಮಾಡಲು ನಮಗೆ ಅನುಮತಿಸಿ, ನಮ್ಮ ಬಸ್ಸುಗಳಿಗೆ ಅನುಮತಿ ನೀಡಿ'' ಎಂದು ಅವರು ಬರೆದಿದ್ದರು

``ನಮ್ಮ ಬಸ್ಸುಗಳು ಗಡಿಯಲ್ಲಿ ನಿಂತಿವೆ. ಆದಿತ್ಯನಾಥ್ ಜೀ ನಮಗೆ ಅನುಮತಿ ನೀಡಿ. ನಮ್ಮ ಸೋದರ ಸೋದರಿಯರಿಗೆ ಸಹಾಯ ಮಾಡೋಣ'' ಎಂದು ಇನ್ನೊಂದು ಟ್ವೀಟ್‍ನಲ್ಲಿ ಬರೆದಿರುವ ಅವರು ಉತ್ತರ ಪ್ರದೇಶ ಗಡಿಯಲ್ಲಿ ಕಾಯುತ್ತಿರುವ ಬಸ್ಸುಗಳ ವೀಡಿಯೋ ಕೂಡ ಪೋಸ್ಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News