ದ.ಕ. ಜಿಲ್ಲೆಯಲ್ಲಿ ಮತ್ತೆ ಎರಡು ಕೊರೋನ ಪ್ರಕರಣ ಪತ್ತೆ; ಸೋಂಕಿತರ ಸಂಖ್ಯೆ 54ಕ್ಕೇರಿಕೆ
Update: 2020-05-18 17:48 IST
ಮಂಗಳೂರು, ಮೇ 18: ದ.ಕ.ಜಿಲ್ಲೆಯಲ್ಲಿ ಸೋಮವಾರ ಮತ್ತೆ ಓರ್ವ ಯುವಕ ಮತ್ತು ಮಹಿಳೆ ಸಹಿತ ಇಬ್ಬರಲ್ಲಿ ಕೊರೋನ ಪಾಸಿಟಿವ್ ಪ್ರಕರಣ ದೃಢಗೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು 54 ಪ್ರಕರಣಗಳು ಪತ್ತೆಯಾದಂತಾಗಿದೆ. ಆ ಪೈಕಿ ದ.ಕ.ಜಿಲ್ಲೆಯ 48, ಕಾಸರಗೋಡಿನ 4, ಕಾರ್ಕಳದ 1, ಭಟ್ಕಳದ 1 ಪ್ರಕರಣ ಸೇರಿವೆ.
ಮಹಾರಾಷ್ಟ್ರದ ರಾಯಗಢದಿಂದ ಮಂಗಳೂರಿಗೆ ಬಂದ 30 ವರ್ಷದ ಯುವಕನಿಗೆ ಮತ್ತು ನಗರದ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಪಡೆಯುತ್ತಿದ್ದ 55 ವರ್ಷ ಪ್ರಾಯದ ಮಹಿಳೆಗೆ ಸೋಂಕು ದೃಢಗೊಂಡಿವೆ. ಇದೀಗ ಇಬ್ಬರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.