ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಟೆಸ್ಟ್ ಲ್ಯಾಬ್ ಕಾರ್ಯಾರಂಭಿಸಲು ಅವಕಾಶ ನೀಡಬೇಕು : ಐವನ್ ಡಿಸೋಜಾ

Update: 2020-05-18 12:21 GMT

ಮಂಗಳೂರು, ಮೇ 18: ದ.ಕ. ಜಿಲ್ಲೆಯಲ್ಲಿ ಕೋವಿಡ್ ಹಾಗೂ ಅದರಿಂದ ಸಾವಿನ ಸಂಖ್ಯೆಯನ್ನು ನಿಯಂತ್ರಿಸಲು ಪರೀಕ್ಷೆ ಅತೀ ಅಗತ್ಯವಾಗಿದ್ದು, ಈಗಾಗಲೇ ಅನುಮತಿ ಕೋರಿರುವ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಟೆಸ್ಟ್ ಲ್ಯಾಬ್ ಕಾರ್ಯಾರಂಭಿಸಲು ಅವಕಾಶ ನೀಡಬೇಕು ಎಂದು ವಿಧಾನ ಪರಿಷತ್ ಸಸ್ಯ ಐವನ್ ಡಿಸೋಜಾ ಆಗ್ರಹಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಯೆನೆಪೋಯ, ಫಾದರ್ ಮುಲ್ಲರ್ಸ್ ಹಾಗೂ ಕೆ.ಎಸ್. ಹೆಗ್ಡೆ ಆಸ್ಪತ್ರೆಗಳವರು ಕೋವಿಡ್ ಟೆಸ್ಟ್ ಲ್ಯಾಬ್‌ಗೆ ಅನುಮತಿ ಕೋರಿದ್ದು, ಅದಕ್ಕೆ ಐಸಿಎಂಆರ್‌ನಿಂದ ಅವಕಾಶ ನೀಡುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಕೋವಿಡ್ ಆಸ್ಪತ್ರೆಯಾಗಿರುವ ವೆನ್‌ಲಾಕ್‌ನಲ್ಲಿ ಸ್ವಯಂ ಪ್ರೇರಿತವಾಗಿ ಕೋವಿಡ್ ತಪಾಸಣೆಗೆ ಅವಕಾಶವಿಲ್ಲ. ಈಗಾಗಲೇ ವಿದೇಶದಲ್ಲಿ ಬಂದವ ರಲ್ಲಿ 15 ಮಂದಿಗೆ ಕೊರೋನ ಸೋಂಕು ದೃಢಗೊಂಡಿದೆ. ವರದಿಗಾಗಿ ಮೂರ್ನಾಲ್ಕು ದಿನಗಳು ಕಾಯಬೇಕಾಗುತ್ತದೆ. ಆರೋಗ್ಯ ವಿಭಾಗವನ್ನು ಅಪ್‌ಗ್ರೇಡ್ ಮಾಡದಿದ್ದಲ್ಲಿ ಮುಂದಿನ ದಿನಗಳು ಜಿಲ್ಲೆಗೆ ಕಷ್ಟಕರವಾಗಲಿದೆ ಎಂದು ಅವರು ಹೇಳಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಲು ಸುಗ್ರೀವಾಜ್ಞೆ ತಂದಿರುವುದು ಯಾವ ಉದ್ದೇಶಕ್ಕೆ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರಕಾರ, ವಿರೋಧ ಪಕ್ಷವಿರುವಾಗ ಎಪಿಎಂಸಿ ಮಾರುಕಟ್ಟೆಯನ್ನು ಅದಾನಿಗೆ, ಇನ್ಯಾರೋ ಕಂಪನಿಗೆ ಮಾರಾಟ ಮಾಡುವ ಹುನ್ನಾರ ನಡೆಯುತ್ತಿದೆ. ಇಂತಹ ಕಾನೂನು ದೇಶಕ್ಕೆ ಗಂಡಾಂತರ ಎಂದವರು ಆಕ್ಷೇಪಿಸಿದರು.

ವಿದೇಶದಲ್ಲಿ ಸಿಲುಕಿದ ನೆರೆಯ ಕೇರಳದವರನ್ನು 15ವಿಮಾನದಲ್ಲಿ ಏರ್‌ಲ್‌ಟಿ ಮಾಡಲಾಗಿದೆ. ಆದರೆ ಮಂಗಳೂರಿಗೆ ಈತನಕ ಬಂದಿರುವುದು 2ವಿಮಾನ ಮಾತ್ರ. ದುಬೈ, ಮುಂಬೈಯಿಂದ ಬಂದವರಿಗೆ ಮೂಲ ಸೌಕರ್ಯ ನೀಡುವಲ್ಲಿ ಜಿಲ್ಲಾಡಳಿತ ವಿಲವಾಗಿದೆ. ಸಂಸದರು ಮಾಡುವ ಕೆಲಸ ವಿಧಾನ ಪರಿಷತ್ ಸದಸ್ಯರು ಮಾಡಲು ಆಗಲ್ಲಘಿ. ರಾಜ್ಯಕ್ಕೆ ಹೆಚ್ಚಿನ ಅನುದಾನ ತರಲು ಸಂಸದರ ನಿಯೋಗ ಕೇಂದ್ರಕ್ಕೆ ತೆರಳಲಿ ಎಂದರು.

ಸರಕಾರ ಇರುವುದು ಸಾಲ ಮೇಳ ಮಾಡಲು ಅಲ್ಲ!

ಕೇಂದ್ರ ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಸಾಲ ಮೇಳವೇ ಹೊರತು ಬೇರೇನೂ ಅಲ್ಲ. ಅದರಿಂದ ಉದ್ಯಮಿಗಳು, ಕೈಗಾರಿಕೆಗಳಿಗೆ ಒಂದಿಷ್ಟು ಈ ಪ್ಯಾಕೇಜ್‌ನಿಂದ ಲಾಭವಾಗಬಹುದೇ ಹೊರು ಜನಸಾಮಾನ್ಯರಿಗೆ ಏನೂ ಪ್ರಯೋಜನವಾಗದು. ಲಾಕ್‌ಡೌನ್‌ ನಿಂದಾಗಿ ಈಗಾಗಲೇ ಲಕ್ಷಾಂತರ ಮಂದಿ ಬೀದಿಗೆ ಬಿದ್ದಿದಾರೆ. ಮಳೆಯ ಸಂದರ್ಭ ವಲಸೆ ಕಾರ್ಮಿಕರ ಪರಿಸ್ಥಿತಿಯನ್ನು ನೋಡಲಾಗದು. ಅವರಿಗೆ ಕನಿಷ್ಠ ಐದು ಕೋಟಿ ರೂ. ಖರ್ಚು ಮಾಡಿದ್ದರೆ ಅವರನ್ನು ರೈಲಿನ ಮೂಲಕ ಸುವ್ಯವಸ್ಥಿತವಾಗಿ ಅವರ ಊರುಗಳಿಗೆ ತಲುಪಿಸಬಹು ದಿತ್ತು. ಆದರೆ ಅವರೆಲ್ಲಾ ಇಂದು ದಾರಿಮಧ್ಯೆ ಅಲೆಯುವಂತಾಗಿದೆ ಎಂದು ಹೇಳಿದು.

ನೋಂದಾಯಿತ ರಿಕ್ಷಾ ಚಾಲಕರಿಗೆ 5000 ರೂ.ನಂತೆ ಅವರ ಖಾತೆಗೆ ಹಣ ಹಾಕುವುದಾಗಿ ಹೇಳಿ 9 ದಿನಗಳಾದರೂ ಹಣ ಬಿದ್ದಿಲ್ಲ. ಕಳೆದ ಬಾರಿಯ ನೆರೆ ಸಂತ್ರಸ್ತರು ಕೂಡಾ ಇನ್ನೂ ಬೀದಿಯಲ್ಲಿದ್ದಾರೆ. ಈ ನಡುವೆ ಕೇಂದ್ರ ಸರಕಾರ ಕಷ್ಟಕಾಲದಲ್ಲಿ ತಮ್ಮ ದುಡಿಮೆಯಲ್ಲಿ ಉಳಿಸಿದ ಪಿಎಫ್ ಹಣವನ್ನು ತೆಗೆದು ಖರ್ಚು ಮಾಡುವಂತೆ ಸಲಹೆ ನೀಡುತ್ತದೆ. ಕೋವಿಡ್ ಹೆಸರಿನಲ್ಲಿ ಜನರನ್ನು ಗಂಡಾಂತರಕ್ಕೆ ತಳ್ಳುತ್ತಿದೆ. ಬಿಜೆಪಿ ತನ್ನ ಗುಪ್ತ ಅಜೆಂಡಾವನ್ನು ಜಾರಿಗೊಳಿಸುತ್ತಿದೆ ಎಂದು ಆರೋಪಿಸಿದರು.

ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಪರಿಣಾಮಕಾರಿ ಕ್ರಮ ಆಗಿಲ್ಲ. ಬಿಜೆಪಿಯ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಹೊರತುಪಡಿಸಿ ಉಳಿದವರು ಯಾರೂ ಮಾತನಾಡುತ್ತಿಲ್ಲ. ಗಲ್ಫ್ ರಾಷ್ಟ್ರ ಸೇರಿದಂತೆ ವಿದೇಶಗಳಲ್ಲಿರುವ ಕನ್ನಡಿಗರು ಕಣ್ಣೀರು ಹಾಕುತ್ತಿದ್ದಾರೆ. ರಾಜ್ಯದ ಸಂಸದರು ಈ ಬಗ್ಗೆ ಗಂಭೀರವಾಗಿಲ್ಲ ಎಂದು ಅವರು ದೂರಿದರು.

4.0 ಹಂತದ ಲಾಕ್‌ಡೌನ್ ಸಂದರ್ಭ ರಾಜ್ಯ ಸರಕಾರ ತನ್ನ ಬುದ್ಧಿಮತ್ತೆಯನ್ನು ಪ್ರಯೋಗಿಸಿ ಜನಸಾಮಾನ್ಯರಿಗೆ ಯೋಗ್ಯವಾದ ತೀರ್ಮಾನ ವನ್ನು ಕೈಗೊಳ್ಳಬೇಕು. ಮಳೆಗಾಲ ಕೂಡಾ ಆರಂಭವಾಗುವುದರಿಂದ ಈ ಸಂದರ್ಭದಲ್ಲಿ ಸಾಮಾನ್ಯವಾಗಿರುವ ಜ್ವರ, ಶೀತ ಸೇರಿದಂತೆ ಇತರ ರೋಗಗಳಿಗೆ ಅಗತ್ಯವಾದ ಚಿಕಿತ್ಸೆ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಡ್ರಗ್ ನಿಯಂತ್ರಣ ಕೇಂದ್ರದ ಮುಂದೆ ತಾನು ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದು ಐವನ್ ಡಿಸೋಜಾ ಹೇಳಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕಾರದ ಧರಣೇಂದ್ರ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಂತೋಷ್ ಕುಮಾರ್, ಮನಪಾ ಪ್ರತಿಪಕ್ಷ ನಾಯಕ ಅಬ್ದುಲ್ ರವ್ೂ, ಮೂಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಾಜಿ ಮೇಯರ್‌ಗಳಾದ ಬಾಸ್ಕರ್ ಕೆ., ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ಎ.ಸಿ. ವಿನಯ್‌ರಾಜ್, ಜೆ. ನಾಗೇಂದ್ರ ಕುಮಾರ್, ಎನ್‌ಪಿ ಮನುರಾಜ್, ನಝೀರ್ ಬಜಾಲ್ ಉಪಸ್ಥಿತರಿದ್ದರು

ಶಾಸಕರ ವರ್ತನೆ ಸಾಮ್ರಾಜ್ಯಶಾಹಿ

ಸೆಂಟ್ರಲ್ ಮಾರುಕಟ್ಟೆಯ ತರಕಾರಿ ಹಾಗೂ ಹಣ್ಣಿನ ವ್ಯಾಪಾರವನ್ನು ತರಾತುರಿಯಲ್ಲಿ ಎಪಿಎಂಸಿ ಮಾರ್ಕೆಟ್‌ಗೆ ಸ್ಥಳಾಂತರ ಮಾಡಿದ ಪರಿಣಾಮ ತರಕಾರಿ ಮತ್ತು ಹಣ್ಣಿನ ವ್ಯಾಪಾರಿಗಳು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಮೂಲಸೌಕರ್ಯ, ಸಮರ್ಪಕ ವ್ಯವಸ್ಥೆ ಮಾಡದೆ ಈ ರೀತಿ ಸ್ಥಳಾಂ ತರ ಮಾಡಿದ್ದು ಸರಿಯಲ್ಲ. ಈ ಮೂಲಕ ಸ್ಥಳೀಯ ಶಾಸಕರು ಸಾಮಾಜ್ರ್ಯಶಾಹಿಗಳಂತೆ ವರ್ತಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News