×
Ad

ಸೆಂಟ್ರಲ್ ಮಾರ್ಕೆಟ್ ಎ.ಪಿ.ಎಂ.ಸಿ ಯಾರ್ಡ್‌ಗೆ ಸ್ಥಳಾಂತರ: ಜಿಲ್ಲಾ ಕಾಂಗ್ರೆಸ್ ನಿಂದ ಪರಿಶೀಲನಾ ಸಮಿತಿ ರಚನೆ

Update: 2020-05-18 18:20 IST

ಮಂಗಳೂರು, ಮೇ 18: ಸೆಂಟ್ರಲ್ ಮಾರ್ಕೆಟ್‌ನಿಂದ ಬೈಕಂಪಾಡಿ ಎ.ಪಿ.ಎಂ.ಸಿಗೆ ಸ್ಥಳಾಂತರಗೊಂಡ ತರಕಾರಿ ಸಗಟು ವ್ಯಾಪಾರಿಗಳ ಬದುಕು ಮೊದಲ ಮಳೆಗೇ ಕೊಚ್ಚಿ ಹೋಗಿದೆ. ಅವ್ಯವಸ್ಥೆಯ ಪರಮಾವಧಿಯಿಂದ ವ್ಯಾಪಾರಿಗಳು ಅತಂತ್ರರಾಗಿದ್ದಾರೆ. ಅವರ ಸರಕು ಸರಂಜಾಮುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯು ಈ ಬಗ್ಗೆ ವರದಿ ಸಲ್ಲಿಸಲು ಪರಿಶೀಲನಾ ಸಮಿತಿಯನ್ನು ರಚಿಸಿರುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.

ಈ ಸಮಿತಿಯಲ್ಲಿ ಈ ಕೆಳಗಿನವರನ್ನು ನೇಮಿಸಲಾಗಿದೆ

ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಸಮಿತಿಯ ಅಧ್ಯಕ್ಷರಾಗಿದ್ದು, ಶಶಿಧರ ಹೆಗ್ಡೆ, ಸದಾಶಿವ ಉಳ್ಳಾಲ್, ಭಾಸ್ಕರ ಕೆ., ಶಾಹುಲ್‌ ಹಮೀದ್, ನವೀನ್ ಡಿಸೋಜಾ, ವಸಂತ ಬರ್ನಾಡ್, ಪ್ರವೀಣ್ ಚಂದ್ರ ಆಳ್ವ, ಪ್ರತಿಭಾ ಕುಳಾಯಿ ಸಮಿತಿಯ ಸದಸ್ಯರಾಗಿದ್ದಾರೆ.

ಸದ್ರಿ ಸಮಿತಿಯು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ 2 ದಿನಗಳೊಳಗೆ ಸಮಗ್ರ ವರದಿಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಸಲ್ಲಿಸಲು ಜಿಲ್ಲಾಧ್ಯಕ್ಷರಾದ ಕೆ.ಹರೀಶ್ ಕುಮಾರ್ ಈ ಮೂಲಕ ನಿರ್ದೇಶನ ನೀಡಿದ್ದಾರೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News