ಕ್ವಾರಂಟೈನ್ ಅವಧಿ ಪೂರ್ಣ: ತೆಕ್ಕಟ್ಟೆ ಪೆಟ್ರೋಲ್ ಬಂಕ್ ಪುನಾರಂಭ

Update: 2020-05-18 14:41 GMT

ಕುಂದಾಪುರ, ಮೇ 18: ಮುಂಬೈನಿಂದ ಖರ್ಜೂರ ಸಾಗಾಟದ ಲಾರಿ ಯಲ್ಲಿ ಪ್ರಯಾಣಿಸಿದ್ದ ಮಂಡ್ಯ ಮೂಲದ ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ಕಾರಣಕ್ಕೆ ಕಳೆದ 21 ದಿನಗಳಿಂದ ಬಂದ್ ಆಗಿದ್ದ ತೆಕ್ಕಟ್ಟೆಯ ಪೆಟ್ರೋಲ್ ಬಂಕ್, ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ವುತ್ತೆ ಇಂದಿನಿಂದ ಪುನಾರಂಭಗೊಂಡಿದೆ.

ಮಂಡ್ಯ ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಪ್ರಯಾಣಿಸಿದ್ದ ಲಾರಿಯು ಎ.21ರಂದು ತೆಕ್ಕಟ್ಟೆ ಪೆಟ್ರೋಲ್ ಬಂಕ್‌ಗೆ ಆಗಮಿಸಿದ್ದು, ಅಲ್ಲಿ ಆತ ಸ್ನಾನ, ಊಟ ಮಾಡಿ, ಕೆಲ ಸಮಯ ಅಲ್ಲೇ ವಿಶ್ರಾಂತಿ ಪಡೆದಿದ್ದನು. ಈ ಮಾಹಿತಿ ಎ.27ರಂದು ತಿಳಿದ ಕಾರಣ, ಎ.28ರಂದು ಮುಂಜಾಗ್ರತಾ ಕ್ರಮವಾಗಿ ಪೆಟ್ರೋಲ್ ಬಂಕ್‌ನ್ನು ಬಂದ್ ಮಾಡಲಾಗಿತ್ತು. ಅಲ್ಲದೆ ಪೆಟ್ರೋಲ್ ಬಂಕ್ ಮಾಲಕ ಸೇರಿದಂತೆ ಒಟ್ಟು 11 ಮಂದಿ ಸಿಬ್ಬಂದಿ ಮತ್ತು ಸಾಸ್ತಾನ ಟೋಲ್ ಗೇಟ್‌ನ ಏಳು ಮಂದಿ ಸಿಬ್ಬಂದಿಯನ್ನು ಕ್ವಾರೆಂಟೈನ್‌ನಲ್ಲಿ ಇರಿಸಲಾಗಿತ್ತು.

ಇವರೆಲ್ಲರ 14 ದಿನಗಳ ಹೋಂ ಕ್ವಾರೆಂಟೈನ್ ಅವಧಿ ಮುಗಿದಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ 21ದಿನಗಳಿಂದ ಬಂದ್ ಆಗಿದ್ದ ಪೆಟ್ರೋಲ್ ಬಂಕ್ ಇದೀಗ ಪುನಾರಂಭಗೊಂಡಿದೆ. ಇಲ್ಲಿ ಸುರಕ್ಷಿತ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ ಹಾಗೂ ಮಾಸ್ಕ್ ಧರಿಸಲಾಗು ತ್ತಿದೆ. ಇಂದು ತೆಕ್ಕಟ್ಟೆ ವ್ಯಾಪ್ತಿಯ ಐವರು ಆಶಾಕಾರ್ಯಕರ್ತೆಯರಿಗೆ ಪೆಟ್ರೋಲ್ ಬಂಕ್ ಮಾಲಕರಾದ ಗುರುಪ್ರಸಾದ್ ಹತ್ವಾರ್ ಹಾಗೂ ರೋಹಿಣಿ ಹತ್ವಾರ್ ದಂಪತಿಗಳು ದಿನಸಿ ಕಿಟ್ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News