ಉಡುಪಿ ಯಿಂದ ಇತರ ಜಿಲ್ಲೆಗಳಿಗೆ ಕೆಎಸ್ಸಾರ್ಟಿಸಿ ಬಸ್ ಸಂಚಾರ : ಉದಯಕುಮಾರ್ ಶೆಟ್ಟಿ
ಉಡುಪಿ : ರಾಜ್ಯ ಸರಕಾರದ ಅನುಮತಿ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಿಂದ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳನ್ನು ಸಂಪರ್ಕಿಸುವ ಕೆಎಸ್ಸಾರ್ಟಿಸಿ ಬಸ್ಸುಗಳ ಸಂಚಾರ ಆರಂಭ ಗೊಳ್ಳಲಿದೆ.
ಉಡುಪಿ ಡಿಪೋದಿಂದ ಬೆಂಗಳೂರಿಗೆ 4, ಶಿವಮೊಗ್ಗ 2 ಮತ್ತು ಚಿಕ್ಕಮಗಳೂರು, ಮೈಸೂರು, ಹುಬ್ಬಳ್ಳಿ ಗಳಿಗೆ ಒಟ್ಟು 12 ಬಸ್ಸುಗಳು ಓಡಾಟ ನಡೆಸಲಿದೆ ಎಂದು ಡಿಪೋ ಮ್ಯಾನೇಜರ್ ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಅದೇ ರೀತಿ ಕುಂದಾಪುರ ಡಿಪೋದಿಂದ ಬೆಂಗಳೂರಿಗೆ 6 ಸಹಿತ ಮೈಸೂರು, ಶಿವಮೊಗ್ಗಗಳಿಗೂ ಬಸ್ಸುಗಳು ಸಂಚರಿಸಲಿದೆ. ಈ ಎಲ್ಲಾ ಬಸ್ಸುಗಳು ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಮಾತ್ರ ಸಂಚಾರ ನಡೆಸಲಿದೆ ಎಂದು ತಿಳಿಸಿದ್ದಾರೆ.
ಮಂಗಳೂರಿಗೆ ಹೋಗುವ ಪ್ರಯಾಣಿಕರು ಬೆಂಗಳೂರಿನ ಬಸ್ ಮೂಲಕ ತೆರಳ ಬಹುದಾಗಿದೆ ಕಾರವಾರಕ್ಕೆ ಯಾವುದೇ ಬಸ್ ಸಂಚಾರ ಇಲ್ಲ. ಬಸ್ ಮೂಲಕ ಸಂಚರಿಸಲು ಯಾವುದೇ ವಿಶೇಷ ಪಾಸ್ ಗಳ ಅಗತ್ಯ ಇರುವುದಿಲ್ಲ ಎಂದು ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯೊಳಗೆ ಈಗಾಗಲೇ ಆರಂಭಗೊಂಡಿರುವ ಬಸ್ಸುಗಳ ಓಡಾಟ ಮುಂದುವರಿಸಲಿದೆ. ಕುಂದಾಪುರ, ಬೈಂದೂರು, ಕಾರ್ಕಳ, ಹೆಜಮಾಡಿ ಮತ್ತು ಉಡುಪಿ ನಗರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬಸ್ ಸಂಚರಿಸಲಿವೆ ಅದು ಬಿಟ್ಟು ಹೆಚ್ಚುವರಿಯಾಗಿ ಬಸ್ಸುಗಳನ್ನು ರಸ್ತೆ ಗಳಿಸುವ ಯಾವುದೇ ಉದ್ದೇಶ ಸದ್ಯಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಎರಡು ದಿನಗಳ ನಂತರ ಕೆಲವೊಂದು ಖಾಸಗಿ ಬಸ್ಸುಗಳು ಸಂಚಾರ ಆರಂಭಿಸುವ ಬಗ್ಗೆ ನಿರ್ಧರಿಸಲಾಗಿದೆ ಮುಂದೆ ಜನಜೀವನ ಹಾಗೂ ಬೇಡಿಕೆಯನ್ನು ಗಮನಿಸಿ ಇನ್ನಷ್ಟು ಬಸ್ಸುಗಳನ್ನು ಓಡಿಸುವ ಉದ್ದೇಶ ಹೊಂದಿದ್ದೇವೆ ಎಂದು ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯಕ್ ತಿಳಿಸಿದ್ದಾರೆ