×
Ad

ಟೀಮ್ ಬಿ-ಹ್ಯೂಮನ್, ಹಿದಾಯ ಫೌಂಡೇಶನ್‌ನಿಂದ ರಮಝಾನ್ ಕಿಟ್ ವಿತರಣೆ

Update: 2020-05-18 22:55 IST

ಮಂಗಳೂರು, ಮೇ 18: ಮಂಗಳೂರಿನ ಟೀಮ್ ಬಿ-ಹ್ಯೂಮನ್ ಮತ್ತು ಹಿದಾಯ ಫೌಂಡೇಶನ್ ಜಿಲ್ಲಾ ಎನ್‌ಜಿಒ ಕಾರ್ಡಿನೇಶನ್ ಕಮಿಟಿಯ ಸಹಯೋಗದೊಂದಿಗೆ ಸೋಮವಾರ ಬಂಟ್ವಾಳ ತಾಲೂಕಿನ ಬೊಳ್ಳಾಯಿ ಜಮಾತಿನ 110 ಕುಟುಂಬಗಳಿಗೆ ರಮಝಾನ್ ಕಿಟ್ ವಿತರಿಸಲಾಯಿತು.

ಬೊಳ್ಳಾಯಿಯ ಬದ್ರಿಯಾ ಜುಮಾ ಮಸೀದಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖತೀಬ್ ಅಬ್ಬಾಸ್ ಸಅದಿ ದುಆಗೈದರು. ಬಿ-ಹ್ಯೂಮನ್‌ನ ಸದಸ್ಯ ಯು.ಬಿ. ಸಲೀಂ ಮಾತನಾಡಿ, ‘ಬಿ-ಹ್ಯೂಮನ್ ಎಂದರೆ ಮಾನವನಾಗಿರಿ ಎಂದರ್ಥ. ಒಬ್ಬ ಮನುಷ್ಯನು, ಸಂಕಷ್ಟದಲ್ಲಿರುವ ಇನ್ನೊಬ್ಬನಿಗೆ ಸ್ಪಂದಿಸಿದರೆ ಅಥವಾ ನೆರವಾದರೆ ಮಾತ್ರ ಒಬ್ಬ ಮಾನವನಾಗಿರಲು ಸಾಧ್ಯ. ಆಸೀಫ್ ಡೀಲ್ಸ್ ನೇತೃತ್ವದ ಟೀಮ್ ಬಿ-ಹ್ಯೂಮನ್ ಸಂಘಟನೆಯು ಹಲವು ಕುಟುಂಬಗಳಿಗೆ ಬೇರೆ ಬೇರೆ ರೀತಿಯ ನೆರವು ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಟೀಮ್ ಬಿ-ಹ್ಯೂಮನ್ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್ಸ್, ಬೊಳ್ಳಾಯಿ ಜುಮಾ ಮಸ್ಜಿದ್ ಅಧ್ಯಕ್ಷ ಬಿ.ಎಸ್. ಮುಹಮ್ಮದ್, ಶಕೂರ್ ಹಾಜಿ ಹಿದಾಯ, ಟೀಮ್ ಬಿ-ಹ್ಯೂಮನ್‌ನ ಸದಸ್ಯರಾದ ಅಶ್ರಫ್ ಐನಾ, ಅಲ್ತಾಫ್, ಇಮ್ತಿಯಾಝ್ ಪಾರ್ಲೆ, ಶಿಯಾ ಡೀಲ್ಸ್, ಅಹ್ನಫ್ ಡೀಲ್ಸ್, ಹನೀಫ್ ಬೊಳ್ಳಾಯಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಪಿ.ಜೆ. ಅಬ್ದುಲ್ ಸಲೀಂ ಸ್ವಾಗತಿಸಿದರು. ಮುಸ್ತಫಾ ಬೊಳ್ಳಾಯಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News