×
Ad

ಕೋವಿಡ್-19: ಉಡುಪಿಯಲ್ಲಿ 104 ವರದಿಗಳು ನೆಗೆಟಿವ್

Update: 2020-05-19 20:52 IST

ಉಡುಪಿ, ಮೇ 19: ನೋವೆಲ್ ಕೊರೋನ ವೈರಸ್ (ಕೋವಿಡ್- 19) ಸೋಂಕಿನ ಪರೀಕ್ಷೆಗಾಗಿ ಕಳುಹಿಸಿದ ಶಂಕಿತರ ಗಂಟಲು ದ್ರವದ ಮಾದರಿಗಳಲ್ಲಿ ಮಂಗಳವಾರ 104 ವರದಿಗಳು ನೆಗೆಟಿವ್ ಫಲಿತಾಂಶ ನೀಡಿದ್ದು, ಮುಂಬಯಿಯಿಂದ ಬಂದ ನಾಲ್ವರು ಹಾಗೂ ಚಿತ್ರದುರ್ಗದಿಂದ ಕ್ಯಾನ್ಸರ್ ಚಿಕಿತ್ಸೆಗೆ ಬಂದ ಬಾಲಕಿ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಸಹ ಕೊರೋನ ಸೋಂಕು ವ್ಯಾಪಕವಾಗಿರುವ ಹೊರರಾಜ್ಯಗಳಿಂದ ಆಗಮಿಸಿದ 171 ಮಂದಿಯೂ ಸೇರಿದಂತೆ ಒಟ್ಟು 222 ಮಂದಿಯ ಗಂಟಲುದ್ರವದ ಸ್ಯಾಂಪಲ್ ಗಳನ್ನು ಪರೀಕ್ಷೆಗಾಗಿ ಕಳುಹಿಸಿದ್ದು, ಇದರಿಂದ ಒಟ್ಟು 654 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಲು ಇನ್ನೂ ಬಾಕಿ ಇವೆ ಎಂದು ಅವರು ತಿಳಿಸಿದರು.

ಇಂದು ಸಹ ಕೊರೋನ ಸೋಂಕು ವ್ಯಾಪಕವಾಗಿರುವ ಹೊರರಾಜ್ಯಗಳಿಂದ ಆಗಮಿಸಿದ 171 ಮಂದಿಯೂ ಸೇರಿದಂತೆ ಒಟ್ಟು 222 ಮಂದಿಯ ಗಂಟಲುದ್ರವದ ಸ್ಯಾಂಪಲ್ ಗಳನ್ನು ಪರೀಕ್ಷೆಗಾಗಿ ಕಳುಹಿಸಿದ್ದು, ಇದರಿಂದ ಒಟ್ಟು 654 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಲು ಇನ್ನೂ ಬಾಕಿ ಇವೆ ಎಂದು ಅವರು ತಿಳಿಸಿದರು. ಸತತ ಮೂರನೇ ದಿನ ಜಿಲ್ಲೆಯಲ್ಲಿ 4+1 ಪಾಸಿಟಿವ್ ಪ್ರಕರಣ ಬಂದ ಕಾರಣ ಒಟ್ಟು ಸೋಂಕಿತರ ಸಂಖ್ಯೆ ಈಗ 16ಕ್ಕೇರಿದೆ. ಇದರಲ್ಲಿ ಜಿಲ್ಲೆಯವರದ್ದು 15 ಪ್ರಕರಣಗಳು. ಮೇ 11 ಮತ್ತು 13ರಂದು ಮುಂಬಯಿಯಿಂದ ಗರ್ಭಿಣಿ ಯುವತಿ ಸೇರಿದಂತೆ ಒಟ್ಟು ನಾಲ್ಕು ಮಂದಿಯಲ್ಲಿ ಕೊರೋನ ಸೋಂಕು ಕಂಡು ಬಂದಿದ್ದು ಅವರನ್ನು ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಸೂಡ ತಿಳಿಸಿದ್ದಾರೆ.

ಸತತ ಮೂರನೇ ದಿನ ಜಿಲ್ಲೆಯಲ್ಲಿ 4+1 ಪಾಸಿಟಿವ್ ಪ್ರಕರಣ ಬಂದ ಕಾರಣ ಒಟ್ಟು ಸೋಂಕಿತರ ಸಂಖ್ಯೆ ಈಗ 16ಕ್ಕೇರಿದೆ. ಇದರಲ್ಲಿ ಜಿಲ್ಲೆಯವ ರದ್ದು 15 ಪ್ರಕರಣಗಳು. ಮೇ 11 ಮತ್ತು 13ರಂದು ಮುಂಬಯಿಯಿಂದ ಗರ್ಭಿಣಿ ಯುವತಿ ಸೇರಿದಂತೆ ಒಟ್ಟು ನಾಲ್ಕು ಮಂದಿಯಲ್ಲಿ ಕೊರೋನ ಸೋಂಕು ಕಂಡು ಬಂದಿದ್ದು ಅವರನ್ನು ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಸೂಡ ತಿಳಿಸಿದ್ದಾರೆ.

ಇಂದು ಕೊರೋನ ರೋಗದ ಗುಣಲಕ್ಷಣವಿರುವ 222 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇವುಗಳಲ್ಲಿ 46 ಮಂದಿ ಸೋಂಕಿತರ ಸಂಪರ್ಕಕ್ಕೆ ಬಂದವರು, ಒಬ್ಬರು ತೀವ್ರ ಉಸಿರಾಟ ತೊಂದರೆಯವರು, ನಾಲ್ವರು ಶೀತಜ್ವರದಿಂದ ಬಳಲುವವರು ಹಾಗೂ 171 ಮಂದಿ ಕೊರೋನ ಹಾಟ್‌ಸ್ಪಾಟ್‌ಗಳಿಂದ ಬಂದವರ ಸ್ಯಾಂಪಲ್‌ಗಳು ಸೇರಿವೆ ಎಂದು ಅವರು ವಿವರಿಸಿದರು.

ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಸಂಜೆಯವರೆಗೆ ಒಟ್ಟು 2692 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 2038ರ ವರದಿ ಬಂದಿದ್ದು, 2022 ನೆಗೆಟಿವ್ ಆಗಿವೆ. ಒಟ್ಟಾರೆ ಯಾಗಿ ಈವರೆಗೆ 16 ವರದಿಗಳು ಪಾಸಿಟಿವ್ ಆಗಿ ಬಂದಿವೆ ಎಂದರು.

ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ಇಂದು 16 ಮಂದಿ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ 14 ಮಂದಿ ಪುರುಷ ಹಾಗೂ ಇಬ್ಬರು ಮಹಿಳೆಯರಿದ್ದಾರೆ. ಏಳು ಮಂದಿ ಕೊರೋನ ಶಂಕಿತರು, ಏಳು ಮಂದಿ ತೀವ್ರತರದ ಉಸಿರಾಟ ತೊಂದರೆ ಹಾಗೂ ಇಬ್ಬರು ಶೀತಜ್ವರದ ಬಾೆಗೆಆಸ್ಪತ್ರೆಗೆದಾಖಲಾಗಿದ್ದಾರೆ.ವಿವಿ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 11 ಮಂದಿ ಬಿಡುಗಡೆಗೊಂಡಿದ್ದು, 87 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ ಎಂದು ಡಾ.ಸೂಡ ವಿವರಿಸಿದರು.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ ಹಿನ್ನೆಲೆಯೊಂದಿಗೆ ಮಂಗಳವಾರ ಮತ್ತೆ 33 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4666 ಮಂದಿಯನ್ನು ಕೊರೋನದ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 3326(ಇಂದು 75) ಮಂದಿ 28 ದಿನಗಳ ನಿಗಾವನ್ನೂ, 4099 (106) ಮಂದಿ 14 ದಿನಗಳ ನಿಗಾವನ್ನು ಪೂರ್ಣಗೊಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಲೂ 424 ಮಂದಿ ಹೋಮ್ ಕ್ವಾರಂಟೈನ್ ಹಾಗೂ 56 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ.ಸುಧೀರ್‌ಚಂದ್ರ ಸೂಡ ನುಡಿದರು.

ಮಣಿಪಾಲ ಕೋವಿಡ್ ಪ್ರಯೋಗಾಲಯ ಕಾರ್ಯಾರಂಭ: ಮಂಗಳವಾರ 56 ಸ್ಯಾಂಪಲ್ ರವಾನೆ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷೆಗೆ ಅತ್ಯಾಧುನಿಕವಾದ ಸುಸಜ್ಜಿತ ಪ್ರಯೋಗಾಲಯ ಇಂದಿನಿಂದ ಕಾರ್ಯಾರಂಭಿ ಸಿದೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ತಿಳಿಸಿದ್ದಾರೆ.

ಈ ಪ್ರಯೋಗಾಲಯದ ಆರಂಭಕ್ಕೆ ಹಾಗೂ ಕೋವಿಡ್-19ರ ಪರೀಕ್ಷೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹಾಗೂ ಕೆಎಂಸಿ ಕಾಲೇಜಿನ ಅನುಮೋದನೆ ದೊರೆತಿದೆ. ಈ ಮೂಲಕ ಜಿಲ್ಲೆಯಲ್ಲಿ ಸರಕಾರಿ ಅಥವಾ ಖಾಸಗಿ ವಲಯದಲ್ಲಿ ಕೋವಿಡ್-19ರ ಪರೀಕ್ಷೆಗೆ ಅನುಮತಿ ಪಡೆದ ಮೊದಲ ಆಸ್ಪತ್ರೆ ಇದಾಗಿದೆ ಎಂದವರು ನುಡಿದರು.

ಇದರಿಂದ ಕೋವಿಡ್-19 ಸ್ಯಾಂಪಲ್‌ಗಳ ವರದಿಯನ್ನು ತ್ವರಿತವಾಗಿ ಪಡೆಯಲು ಸಾದ್ಯವಾಗಲಿದೆ. ಇಲ್ಲಿ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ಸಂಗ್ರಹಿಸಿದ ಮಾದರಿಗಳನ್ನು ಪರೀಕ್ಷಿಸಲಾಗುವುದು. ಹಾಗೂ ಇದರಿಂದ ಮಂಗಳೂರು ಮತ್ತು ಶಿವಮೊಗ್ಗದ ಪರೀಕ್ಷಾ ಕೇಂದ್ರದ ಮೇಲಿನ ಒತ್ತಡ ಕಡಿಮೆ ಯಾಗಲಿದೆ. ಈ ಪ್ರಯೋಗಾಲಯ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ ಎಂದು ಡಾ.ಶೆಟ್ಟಿ ತಿಳಿಸಿದರು.

56 ಸ್ಯಾಂಪಲ್ ರವಾನೆ:  ಹೊಸದಾಗಿ ಪ್ರಾರಂಭಿಸಲಾದ ಕೆಎಂಸಿ ಪ್ರಯೋಗಾಲಯಕ್ಕೆ ನಿನ್ನೆ 45 ಹಾಗೂ ಇಂದು 56 ಸ್ಯಾಂಪಲ್‌ಗಳನ್ನು ಕಳುಹಿಸಲಾಗಿದೆ. ಉಳಿದವುಗಳನ್ನು ಮಂಗಳೂರಿಗೆ ಕಳುಹಿಸಲಾಗಿದೆ. ಲ್ಯಾಬ್ ಸರಿಯಾಗಿ ಕಾರ್ಯನಿರ್ವಹಿಸಲು 2-3ದಿನ ಬೇಕಾಗಲಿದ್ದು, ನಂತರ ಅದು ಪ್ರತಿದಿನ 250 ಸ್ಯಾಂಪಲ್‌ಗಳ ಪರೀಕ್ಷೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಡಿಎಚ್‌ಓ ಡಾ. ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News