ಬಜ್ಪೆ ಆದ್ಯಪಾಡಿ: ಡ್ಯಾಂನಲ್ಲಿ ಮುಳುಗಿ ಬಾಲಕ ಮೃತ್ಯು
Update: 2020-05-19 20:56 IST
ಮಂಗಳೂರು, ಮೇ 19: ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಆದ್ಯಪಾಡಿಯ ಡ್ಯಾಂನಲ್ಲಿ ಬಾಲಕನೊಬ್ಬ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಅಪರಾಹ್ನ ನಡೆದಿದೆ.
ಗುರುಪುರ ಸಮೀಪದ ಮಾಲಿಕ್ (17) ಮೃತಪಟ್ಟ ಬಾಲಕ.
ಈತ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಅಪರಾಹ್ನದ ವೇಳೆಗೆ ಆದ್ಯಪಾಡಿ ಡ್ಯಾಂ ಬಳಿ ತೆರಳಿದ್ದ. ಈ ಸಂದರ್ಭ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಎನ್ನಲಾಗಿದೆ.
ಈ ಬಗ್ಗೆ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.