×
Ad

ಯೆಯ್ಯಡಿಯ ಬಾರೆಬೈಲ್ ಸೀಲ್‌ಡೌನ್

Update: 2020-05-19 21:40 IST

ಮಂಗಳೂರು, ಮೇ 19: ಯೆಯ್ಯಡಿಯ 55 ವರ್ಷದ ಮಹಿಳೆಗೆ ಸೋಮವಾರ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಕದ್ರಿ ಗ್ರಾಮದ ಯೆಯ್ಯಾಡಿಯ ಬಾರೆಬೈಲ್ ಪ್ರದೇಶವನ್ನು ಸೀಲ್‌ಡೌನ್ ಮಾಡಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶಿಸಿದ್ದಾರೆ.

ಸೀಲ್‌ಡೌನ್ ವ್ಯಾಪ್ತಿಯಲ್ಲಿ 14 ಮನೆಗಳ 48 ಮಂದಿ ಇದ್ದಾರೆ. ಇಲ್ಲಿಂದ 5 ಕಿಮೀ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶವನ್ನು ಬರ್ ರೆನ್ ಎಂದು ಗುರುತಿಸಲಾಗಿದ್ದು, 23,600 ಮನೆಗಳು, 4,748 ಅಂಗಡಿ ಮತ್ತು ಕಚೇರಿಗಳಲ್ಲದೆ 1,24,000 ಮಂದಿ ಇದರ ವ್ಯಾಪ್ತಿಗೊಳಪಡಲಿದ್ದಾರೆ.

ಈ ಪ್ರದೇಶಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯಕಾರಿ ಅಭಿಯಂತರರನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News