​ಮೀನುಗಾರಿಕಾ ಬೋಟು ಮುಳುಗಡೆ: 6 ಮಂದಿ ಮೀನುಗಾರರ ರಕ್ಷಣೆ

Update: 2020-05-19 16:25 GMT

ಮಲ್ಪೆ, ಮೇ 19: ಆಳಸಮುದ್ರ ಮೀನುಗಾರಿಕೆಗೆ ಮುಗಿಸಿ ವಾಪಾಸ್ಸು ಮಲ್ಪೆ ಬಂದರಿಗೆ ಬರುತ್ತಿದ್ದ ಬೋಟೊಂದು, ಮಲ್ಪೆ ಸಮೀಪದ ಸಮುದ್ರದಲ್ಲಿ ಬಂಡೆಗೆ ಢಿಕ್ಕಿ ಹೊಡೆದು ನೀರಿನಲ್ಲಿ ಮುಳುಗಡೆಯಾಗಿದ್ದು, ಇದರಲ್ಲಿದ್ದ ಆರು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ರೇಷ್ಮಾ ಖಾರ್ವಿ ಎಂಬವರಿಗೆ ಸೇರಿದ ‘ಶ್ರೀ ಸ್ವರ್ಣರಾಜ್’ ಬೋಟು, ಮೇ 14ರಂದು ರಾತ್ರಿ 10:30ರ ಸುಮಾರಿಗೆ ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿದ್ದು, ಮೀನುಗಾರಿಕೆ ಮುಗಿಸಿ ಮೇ 19ರಂದು ವಾಪಸು ಮಲ್ಪೆ ಬಂದರಿಗೆ ಬರುತ್ತಿತ್ತೆನ್ನಲಾಗಿದೆ. ಈ ವೇಳೆ ನಸುಕಿನ ವೇಳೆ ಒಂದು ಗಂಟೆ ಸುಮಾರಿಗೆ ಮಲ್ಪೆ ಬಂದರಿಗೆ ನೇರ ಸುಮಾರು 6 ಮಾರು ಆಳ ದೂರದಲ್ಲಿ ಬೋಟಿನ ಸ್ಟೇರಿಂಗ್ ಲಾಕ್ ಆಗಿ, ಗಾಳಿಯ ರಭಸಕ್ಕೆ ಬೋಟ್ ನಿಯಂತ್ರಿಸಲು ಸಾಧ್ಯ ವಾಗದೆ ಸಮೀಪದಲ್ಲಿದ್ದ ತೆಲ್‌ಕಲ್ ಬಂಡೆಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ಹಾನಿಯಾಗಿ ನೀರು ಒಳನುಗ್ಗಿ ಬೋಟು ಮುಳುಗಲು ಪ್ರಾರಂಭಿಸಿತು. ಕೂಡಲೇ ಸಮೀಪದಲ್ಲಿದ್ದ ಪಂಡರೀತೀರ್ಥ ದೋಣಿಯವರು ಧಾವಿಸಿ ಬಂದು ಬೋಟಿನಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಿಸಿ ದಡ ಸೇರಿಸಿದ್ದಾರೆ. ಮುಳುಗಡೆಯಾಗುತ್ತಿದ್ದ ಬೋಟನ್ನು ಶ್ರೀಚರಣ ಬೋಟ್ ಮೂಲಕ ರಕ್ಷಿಸಲು ಪ್ರಯತ್ನಿಸಿದರೂ ಲಕಾರಿಯಾಗಲಿಲ್ಲ ಎಂದು ತಿಳಿದು ಬಂದಿದೆ.

ಬೋಟಿನಲ್ಲಿದ್ದ ಸುಮಾರು 5ಲಕ್ಷ ರೂ. ಮೌಲ್ಯದ ಮೀನು, ಬಲೆ, ಡಿಸೇಲ್ ಸಮುದ್ರಪಾಲಾಗಿದೆ. ಸುಮಾರು 80ಲಕ್ಷ ರೂಪಾಯಿ ನ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News