ದಕ ಜಿಲ್ಲೆಯ ಚೆಕ್‍ಪೋಸ್ಟ್: ಹೆದ್ದಾರಿಯಲ್ಲೇ ಪೆಂಡಾಲ್

Update: 2020-05-19 16:39 GMT

ಪಡುಬಿದ್ರಿ: ಕೋವಿಡ್-19 ತಡೆಗಟ್ಟುವ ಉದ್ದೇಶದಿಂದ ಜನರನ್ನು ತಪಾಸಣೆ ಮಾಡುವ ಉದ್ದೇಶದಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಚೆಕ್‍ಪೋಸ್ಟ್  ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ತೆರೆಯಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಚೆಕ್‍ಪೋಸ್ಟ್ ನ ಪೆಂಡಾಲ್ ಹೆದ್ದಾರಿಯಲ್ಲೇ ಅಳವಡಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. 

ಲಾಕ್‍ಡೌನ್ ಸಂದರ್ಭದಲ್ಲಿ ಎರಡೂ ಜಿಲ್ಲೆಯ ಚೆಕ್‍ಪೋಸ್ಟ್ ಗಳನ್ನು ಹೆಜಮಾಡಿಯ ಎರಡು ಬದಿಗಳಲ್ಲಿ ತೆರೆಯಲಾಗಿತ್ತು. ಆದರೆ ಇದೀಗ ಹೊರರಾಜ್ಯದಿಂದ ಜನರು ಕರಾವಳಿಗೆ ಬರುತ್ತಿರುವ ಹಿನ್ನಲೆಯಲ್ಲಿ ತಪಾಸಣೆಗೆ ಜಾಗದ ಕೊರತೆ ಉಂಟಾಗಿರುವುದರಿಂದ ಎರಡೂ ಚೆಕ್‍ಪೋಸ್ಟ್ ಗಳನ್ನು ವಿಸ್ತರಿಸಲಾಗಿದೆ.

ಉಡುಪಿ ಜಿಲ್ಲೆಯ ಚೆಕ್‍ಪೋಸ್ಟ್ ರಸ್ತೆ ಬದಿಯಲ್ಲಿ ತಾತ್ಕಾಲಿಕ ಪೆಂಡಾಲ್ ನಿರ್ಮಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಚೆಕ್‍ಪೋಸ್ಟ್ ರಸ್ತೆಯಲ್ಲೇ ದೊಡ್ಡ ಪೆಂಡಾಲ್ ಹಾಕಲಾಗಿದೆ. ಇದರಿಂದ ವಾಹನ ಸಂಚಾರಕ್ಕೆ ತೊಡಕು ಉಂಟಾಗಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News