×
Ad

​20 ಲಕ್ಷ ಕೋಟಿ ರೂ. ಪ್ಯಾಕೇಜ್ ಜನರ ನೈಜ ಸಮಸ್ಯೆಗಳನ್ನು ಪರಿಹರಿಸಲು ವಿಫಲ: ಪಾಪ್ಯುಲರ್ ಫ್ರಂಟ್

Update: 2020-05-19 22:17 IST

ಮಂಗಳೂರು : ಪ್ರಧಾನ ಮಂತ್ರಿಯವರ 20 ಲಕ್ಷ ಕೋಟಿಯ ಉತ್ತೇಜಕ ಪ್ಯಾಕೇಜ್ ದೇಶವು ತಳಮಟ್ಟದಲ್ಲಿ ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿವೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ತನ್ನ ನಿರ್ಣಯದಲ್ಲಿ ಹೇಳಿದೆ.

ಈ ಉತ್ತೇಜಕ ಪ್ಯಾಕೇಜ್ ಕೇವಲ ನಿಕಟ ಬಂಡವಾಳಶಾಹಿಗಳಿಗೆ ಮತ್ತು ದೊಡ್ಡ ಉದ್ಯಮಗಳಿಗೆ ಮಾತ್ರವಾಗಿದೆ. ನಿಕಟ ಬಂಡವಾಳಶಾಹಿಗಳಿಗೆ ದೇಶದ ಸಂಪತ್ತು ಮತ್ತು ಸಂಪನ್ಮೂಲಗಳಲ್ಲಿ ಅನಿರ್ದಿಷ್ಟ ಪ್ರವೇಶಾವಕಾಶಗಳನ್ನು ಒದಗಿಸಲಾಗಿದೆ. ಲಾಕ್‌ಡೌನ್ ಪ್ಯಾಕೇಜ್‌ನ ಸೋಗಿನಡಿಯಲ್ಲಿ ಸರಕಾರವು ಬಿಜೆಪಿಯ ನೆಚ್ಚಿನ ಕಾರ್ಪೊರೇಷನ್ ಕೇಂದ್ರಗಳಿಗೆ ಲಾಭ ಉಂಟುಮಾಡುವ ಖಾಸಗೀಕರಣದ ಮತ್ತೊಂದು ಗುಪ್ತ ಅಜೆಂಡಾವನ್ನು ಕಾರ್ಯಗತಗೊಳಿಸುತ್ತಿದೆ.

ವಿವಿಧ ಅರ್ಥಶಾಸ್ತ್ರಜ್ಞರಿಂದ ನಡೆಸಲಾದ ಪ್ಯಾಕೇಜ್‌ನ ವಿಶ್ಲೇಷಣೆಯು, ಸರಕಾರವು ಹಿಂದಿನ ಯೋಜನೆ ಮತ್ತು ಘೋಷಣೆಗಳನ್ನು ಒಂದು ಹೊಸ ಪ್ಯಾಕೇಜ್‌ನ ರೂಪದಲ್ಲಿ ಸೇರಿಸಿ ದೇಶವನ್ನು ವಂಚಿಸಲು ಪ್ರಯತ್ನಿಸಿದೆ ಎಂಬುದನ್ನು ಬಹಿರಂಗಪಡಿಸಿದೆ. ಲಾಕ್‌ಡೌನ್‌ನಿಂದ ರಾತ್ರೋರಾತ್ರಿ ಹಸಿವು ಮತ್ತು ಹತಾಶೆಗೆ ದೂಡಲ್ಪಟ್ಟ ದೇಶದ ಕಾರ್ಮಿಕ ವರ್ಗವು ಪರಿಸ್ಥಿತಿಯನ್ನು ಎದುರಿಸಲು ಸರಕಾರದ ನೈಜ ಮಧ್ಯಪ್ರವೇಶವನ್ನು ಎದುರು ನೋಡುತ್ತಿತ್ತು. ಆದರೆ ಅವರು ಪಡೆದದ್ದು ಮಾತ್ರ ಟೊಳ್ಳು ಭರವಸೆಗಳ ಮತ್ತೊಂದು ಪ್ಯಾಕೇಜ್ ಆಗಿತ್ತು. ದುರದೃಷ್ಟವಶಾತ್, ಅತ್ಯಧಿಕ ಪ್ರಸಾರ ಮಾಡಲಾದ 20 ಲಕ್ಷ ಕೋಟಿಯ ಉತ್ತೇಜಕ ಪ್ಯಾಕೇಜ್ ನಿರಾಶೆಯನ್ನಲ್ಲದೇ, ಮತ್ತೇನನ್ನೂ ನೀಡಲಿಲ್ಲ. ಈ ಪ್ಯಾಕೇಜ್‌ನಲ್ಲಿ ಹಸಿವು ಮತ್ತು ನಿರುದ್ಯೋಗವನ್ನು ದೂರ ಮಾಡುವ ನಿಟ್ಟಿನಲ್ಲಿ ಅವರಿಗೆ ಪ್ರತ್ಯಕ್ಷ ಲಾಭ ಉಂಟು ಮಾಡುವಂತದ್ದು ಬಹಳ ಕಡಿಮೆ ಇದೆ. ಅವರನ್ನು ಈಗ ನಿರಾಶ್ರಿ ತರನ್ನಾಗಿ ಮಾರ್ಪಡಿಸಲಾಗುತ್ತಿದೆ. ಲಘು ಉದ್ಯಮ ಮತ್ತು ಉದ್ಯಮಿಗಳ ಸಾಲ ಯೋಜನೆಗಳ ಉದ್ದೇಶ ಅವರಿಗೆ ಲಾಭ ಉಂಟು ಮಾಡು ವಂಥದ್ದಲ್ಲ, ಬದಲಿಗೆ ಅವರನ್ನು ಮತ್ತಷ್ಟು ಸಾಲದ ಕೂಪಕ್ಕೆ ತಳ್ಳುವುದಾಗಿದೆ. ವಿಪತ್ತಿನ ಸಂದರ್ಭದಲ್ಲಿ ತಮ್ಮ ಅಸಹಾಯಕತೆಯನ್ನು ಶೋಷಿಸು ವುದರ ಮೂಲಕ ಜನರಿಗೆ ದ್ರೋಹ ಬಗೆಯುತ್ತಿರುವುದಕ್ಕೆ ನಾವು ಸಾಕ್ಷಿಗಳಾಗುತ್ತಿದ್ದೇವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರಧಾನಿಯವರ ಪ್ಯಾಕೇಜ್ ಭಾರತೀಯರ ಪುನರುಜ್ಜೀವನ ಮತ್ತು ಬದುಕುಳಿಯುವಿಕೆಯ ಉದ್ದೇಶವನ್ನು ಹೊಂದಿಲ್ಲ. ಬದಲಾಗಿ, ನಿಕಟ ಬಂಡವಾಳಶಾಹಿ ಪ್ಯಾಕೇಜ್ ಅಗಿರುವ ಇದು ಆಯ್ದ ಕೆಲವು ಮಂದಿಗೆ‌ ಲಾಭ ಉಂಟುಮಾಡುವ ಗುರಿಯನ್ನಷ್ಟೇ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News