ಕೋಮು ಪ್ರಚೋದಿತ ಪೋಸ್ಟ್ : ಆರೋಪಿ ವಿರುದ್ಧ ದೂರು

Update: 2020-05-19 17:53 GMT

ಗಂಗೊಳ್ಳಿ : ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಕೋಮು ಪ್ರಚೋದಿತ ಹಾಗೂ ಧರ್ಮ ನಿಂದನೆ ಪೋಸ್ಟ್ ಹಾಕಿದ ಆರೋಪದಲ್ಲಿ ಮರವಂತೆಯ ಲೋಕೇಶ್ ಖಾರ್ವಿ ಎಂಬಾತನ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೋಕೇಶ್ ಕೆಲವು ದಿನಗಳ ಹಿಂದೆ ಕೊರೋನ ವೈರಸ್ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಧರ್ಮವೊಂದರ ಪವಿತ್ರ ಗ್ರಂಥದ ಬಗ್ಗೆ ಅವಹೇಳನಕಾರಿಯಾಗಿ ಮತ್ತು ಪ್ರಚೋದನಾತ್ಮಕವಾಗಿ ಸಂದೇಶ ಹಾಕಿದ್ದ ಎಂದು ರಜಬ್ ಗಂಗೊಳ್ಳಿ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News