ಭಟ್ಕಳ : ಮನೆಯಲ್ಲಿ ಈದ್ ನಮಾಝ್ ನಿರ್ವಹಿಸುವಂತೆ ಖಾಝಿಗಳಿಂದ ಮನವಿ

Update: 2020-05-19 18:06 GMT

ಭಟ್ಕಳ : ಈದುಲ್ ಫಿತ್ರ್  ನಮಾಝ್ ನ್ನು ಈ ವರ್ಷ ತಮ್ಮ ತಮ್ಮ ಮನೆಗಳಲ್ಲೇ ನಿರ್ವಹಿಸುವಂತೆ ಭಟ್ಕಳದ ಎರಡು ಜಮಾಅತ್ ನ ಖಾಝಿಗಳು ನಿರ್ಧರಿಸಿದ್ದು ಈ ಕುರಿತಂತೆ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಖಾಝಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ನದವಿ, ಮದನಿ ಹಾಗೂ ಜಮಾಅತುಲ್ ಮುಸ್ಲಿಮೀನ್ ಮುಖ್ಯ ಖಾಝಿ ಮೌಲಾನ ಮುಹಮ್ಮದ್ ಇಕ್ಬಾಲ್ ಮುಲ್ಲಾ ನದ್ವಿ ಇಂದು ಎರಡೂ ಜಮಾಅತ್ ಮುಖಂಡರ ಸಭೆಯನ್ನು ನಡೆಸಿದ ಬಳಿಕ ಈ ನಿರ್ಧಾವನ್ನು ಪ್ರಕಟಿಸಿದ್ದು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ನಮಾಝ್ ನಿರ್ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News