ಜೂನ್ 1 ರಿಂದ ದೇಶೀಯ ವಿಮಾನ ಬುಕ್ಕಿಂಗ್ ಆರಂಭಿಸಲಿದೆ ಸೌದಿ ಏರ್‌ಲೈನ್ಸ್

Update: 2020-05-20 06:08 GMT

ಅಬುಧಾಬಿ, ಮೇ 20: ಮುಂಬರುವ ದಿನಗಳಲ್ಲಿ ದೇಶೀಯ ಹಾಗೂ ಅಂತರ್‌ರಾಷ್ಟ್ರೀಯ ವಿಮಾನಗಳ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸೌದಿ ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

 ವಿಮಾನ ಪ್ರಯಾಣಿಕರು ದೇಶೀಯ ವಿಮಾನಗಳಿಗಾಗಿ ಜೂನ್ 1ರಿಂದ ಹಾಗೂ ಅಂತರ್‌ರಾಷ್ಟ್ರೀಯ ವಿಮಾನಗಳಿಗಾಗಿ ಸೆಪ್ಟಂಬರ್ 1ರಿಂದ ಬುಕ್ಕಿಂಗ್ ಆರಂಭಿಸಬಹುದು ಎಂದು ಸೌದಿ ಏರ್‌ಲೈನ್ಸ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಮಾರ್ಚ್ 20ರಂದು ಸೌದಿ ಅರೇಬಿಯದಲ್ಲಿ ಎಲ್ಲ ದೇಶೀಯ ಹಾಗೂ ಅಂತರ್‌ರಾಷ್ಟ್ರೀಯ ವಿಮಾನಗಳು, ಬಸ್‌ಗಳು, ಟ್ಯಾಕ್ಸಿಗಳು ಹಾಗೂ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿತ್ತು.

ನಾಗರಿಕವಿಮಾನ ಯಾನ ಪ್ರಾಧಿಕಾರವು ಆರೋಗ್ಯ ಸಚಿವಾಲಯದ ಸಮನ್ವಯದೊಂದಿಗೆ ಕೊರೋನ ವೈರಸ್ ಪರಿಣಾಮವನ್ನು ತಡೆಗಟ್ಟುವ ಕ್ರಮಗಳ ವ್ಯವಸ್ಥೆಯನ್ನು ಮೊದಲೇ ಜಾರಿಗೆ ತಂದಿತ್ತು. ಎಲ್ಲಾ ವಿಮಾನದ ವಿಶ್ರಾಂತಿ ಕೊಠಡಿಗಳು ಹಾಗೂ ಸೌಲಭ್ಯಗಳನ್ನು ಸೋಂಕುನಿವಾರಕಗೊಳಿಸಲು ಪ್ರಾಧಿಕಾರವು ಪ್ರತಿದಿನವೂ ಕೆಲಸ ಮಾಡುತ್ತಿತ್ತು. ಎಲ್ಲಾ ಆರೋಗ್ಯ ಹಾಗೂ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಸೌದಿ ವಿಮಾನ ನಿಲ್ದಾಣಗಳಲ್ಲಿ ಕ್ರಮಗಳ ಪ್ಯಾಕೇಜ್‌ಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News