ಮಂಗಳೂರು: ನೀರುಮಾರ್ಗದ ಮಹಿಳೆಗೆ ಕೊರೋನ ಸೋಂಕು ದೃಢ
Update: 2020-05-20 13:28 IST
ಮಂಗಳೂರು, ಮೇ 20: ನಗರದ ಕುಟ್ಟಿಕಾಲ ನೀರುಮಾರ್ಗದ ನಿವಾಸಿ 40ರ ಹರೆಯದ ಮಹಿಳೆಗೆ ಕೊರೋನ ಸೋಂಕು ದೃಢಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಪತ್ತೆಯಾದ ಪಾಸಿಟಿವ್ ಪ್ರಕರಣಗಳ ಸಂಖ್ಯೆ 55ಕ್ಕೇರಿದೆ.
ಮೇ 10ರಂದು ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಮೇ 17ರಂದು ದಾಖಲಾಗಿದ್ದರು ಎಂದು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.