×
Ad

ಆರ್ಥಿಕ ಸಂಕಷ್ಟ: 1,400 ಸಿಬ್ಬಂದಿ ಕೈಬಿಟ್ಟ ಓಲಾ ಕ್ಯಾಬ್ ಕಂಪೆನಿ

Update: 2020-05-20 14:46 IST

ಹೊಸದಿಲ್ಲಿ,ಮೇ 20:ಕೊರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಉಂಟಾಗಿರುವ ಅನಿಶ್ಚಿತತೆ ಹಿನ್ನೆಲೆಯಲ್ಲಿ ತನ್ನ ಕಂಪೆನಿಯ 1,400 ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗುವುದು ಎಂದು ಕ್ಯಾಬ್ ಓಲಾ ಬುಧವಾರ ತಿಳಿಸಿದೆ.

 ಕೊರೋನ ವೈರಸ್ ಸಾಂಕ್ರಾಮಿಕ ಕಾಯಿಲೆಯು ಓಲಾದ ಆದಾಯದ ಮೇಲೆ ತೀವ್ರ ಹೊಡೆತ ನೀಡಿದೆ. ಕಂಪೆನಿಯ ನೌಕರರಿಗೆ ಸಂದೇಶವನ್ನು ಕಳುಹಿಸಿದ್ದೇವೆ.ಕೊರೋನ ವೈರಸ್ ಹರಡುವುದನ್ನು ತಡೆಯಲು ಹೇರಲಾಗಿರುವ ಲಾಕ್‌ಡೌನ್ ನಾಲ್ಕನೇ ಹಂತದಲ್ಲಿದ್ದು, ಆರ್ಥಿಕತೆ ಸಂಪೂರ್ಣ ಸ್ತಬ್ಧವಾಗಿದೆ.ಹೆಚ್ಚಿನ ವ್ಯವಹಾರಗಳು ಕಡಿಮೆಯಾಗಿವೆ. ನಾವು ಬೆಂಗಳೂರು ಮೂಲದ ಓಲಾ ಕ್ಯಾಬ್‌ಗಳ ಸಿಬ್ಬಂದಿಯನ್ನು ವಜಾಗೊಳಿಸಲು ನಿರ್ಧರಿಸಿದ್ದೇವೆ ಎಂದು ಸಂಸ್ಥೆಯ ಸಹ ಸ್ಥಾಪಕ ಹಾಗೂ ಸಿಇಒ ಭಾವೀಶ್ ಅಗರ್ವಾಲ್ ಹೇಳಿದ್ದಾರೆ.

ನೋಟಿಸ್ ಅವಧಿಯನ್ನು ಲೆಕ್ಕಿಸದೆ ಸಮಸ್ಯೆಗೊಳಗಾಗಿರುವ ನೌಕರರಿಗೆ ಮೂರು ತಿಂಗಳ ಸ್ಥಿರ ವೇತನವನ್ನು ಒಳಗೊಂಡಿರುವ ಕನಿಷ್ಠ ಹಣಕಾಸಿನ ಪಾವತಿಯನ್ನು ಕಂಪನಿಯು ನೀಡುತ್ತದೆ. ಕಳೆದ 2 ತಿಂಗಳುಗಳಲ್ಲಿ ಲಾಕ್‌ಡೌನ್‌ನಿಂದಾಗಿ ಕ್ಯಾಬ್‌ನ ಶೇ.95ರಷ್ಟು ಆದಾಯ ಕುಸಿತ ಕಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News