ಡ್ರಗ್ ಜಾಲದ ಆರೋಪಿಗೆ ಝೂಮ್ ವೀಡಿಯೋ ಕಾಲ್ ನಲ್ಲಿ ಗಲ್ಲು ಶಿಕ್ಷೆ ಘೋಷಿಸಿದ ನ್ಯಾಯಾಲಯ

Update: 2020-05-20 09:23 GMT

ಸಿಂಗಾಪುರ: ಪ್ರಪ್ರಥಮ ಬಾರಿಯೆಂಬಂತೆ ಝೂಮ್ ವೀಡಿಯೋ ಕಾಲ್ ಮುಖಾಂತರ ಸಿಂಗಾಪುರದಲ್ಲಿ ವ್ಯಕ್ತಿಯೊಬ್ಬನಿಗೆ ಮರಣದಂಡನೆ ಶಿಕ್ಷೆ ಘೋಷಿಸಲಾಗಿದೆ.

ಮಲೇಷ್ಯಾ ಮೂಲದ 37 ವರ್ಷದ ಪುನಿತನ್ ಗೆನಸನ್ ಎಂಬ ಹೆಸರಿನ ವ್ಯಕ್ತಿ 2011ರಲ್ಲಿ ಪತ್ತೆಯಾಗಿದ್ದ ಹೆರಾಯಿನ್ ಸಾಗಾಟ ಜಾಲದಲ್ಲಿ ಅಪರಾಧಿ ಎಂದು ಸಾಬೀತಾಗಿದೆ.

ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಿಂಗಾಪುರದಲ್ಲಿ ಈಗ ಲಾಕ್‍ಡೌನ್ ಹೇರಲಾಗಿರುವುದರಿಂದ ಈ ರೀತಿ ಝೂಮ್ ವೀಡಿಯೋ ಕಾಲ್ ಮುಖಾಂತರ ಶಿಕ್ಷೆ ಘೋಷಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗಿತ್ತು.

ಅಪರಾಧಿ ಗೆನಸನ್‍ನ ವಕೀಲ ಪೀಟರ್ ಫೆರ್ನಾಂಡೊ ಮಾತನಾಡುತ್ತಾ ತನ್ನ ಕಕ್ಷಿಗಾರ ಮೇಲ್ಮನವಿ ಸಲ್ಲಿಸುವ ಕುರಿತು ಯೋಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಕೇವಲ ತೀರ್ಪನ್ನು ಮಾತ್ರ ವೀಡಿಯೋ ಕಾಲ್ ಮೂಲಕ ನೀಡಿದ್ದಕ್ಕೆ  ಆಕ್ಷೇಪವಿಲ್ಲ ಎಂದೂ ಅವರು ಹೇಳಿದ್ದರೆ.

ಡ್ರಗ್ಸ್ ಪ್ರಕರಣಗಳಲ್ಲಿ ಸಿಂಗಾಪುರದಲ್ಲಿ ಅತ್ಯಂತ ಕಠಿಣ ಶಿಕ್ಷೆ ನೀಡಲಾಗುತ್ತಿದ್ದು ಕಳೆದ ಹಲವು ದಶಕಗಳಿಂದ ಇಲ್ಲಿ  ವಿದೇಶೀಯರೂ ಸೇರಿದಂತೆ ನೂರಾರು ಜನರಿಗೆ  ಗಲ್ಲು ಶಿಕ್ಷೆ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News