×
Ad

ಇನ್ಫೋಸಿಸ್ ವತಿಯಿಂದ 1.5 ಕೋ. ರೂ. ಮೊತ್ತದ ಸಲಕರಣೆ ವಿತರಣೆ

Update: 2020-05-20 18:23 IST

ಮಂಗಳೂರು, ಮೇ 20: ಇನ್ಫೋಸಿಸ್ ಫೌಂಡೇಶನ್ ವತಿಯಿಂದ ದ.ಕ. ಜಿಲ್ಲೆಯ ವೆನ್ಲಾಕ್ ಆಸ್ಪತ್ರೆ ಮತ್ತು ಪೊಲೀಸ್ ಆಯುಕ್ತರ ಕಚೇರಿಗೆ 1.50 ಕೋ.ರೂ. ಮೌಲ್ಯದ ವೈದ್ಯಕೀಯ ಉಪಕರಣಗಳು ಹಾಗೂ ಸಾಮಾಗ್ರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಬುಧವಾರ ಹಸ್ತಾಂತರಿಸಲಾಯಿತು.

ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ 76 ಲಕ್ಷ ರೂ. ಮೌಲ್ಯದ 5 ವೆಂಟಿಲೇಟರ್, ಪಿಪಿಇ ಕಿಟ್, ಥರ್ಮಾಮೀಟರ್ ಮತ್ತು ವೈದ್ಯಕೀಯ ಸಲಕರಣೆ, ಪೊಲೀಸ್ ಆಯುಕ್ತರ ಕಚೇರಿಗೆ 58 ಲಕ್ಷ ರೂ. ಮೌಲ್ಯದ ಪಿಪಿಇ ಕಿಟ್ ಮತ್ತು ಸ್ಯಾನಿಟೈಸರ್ಸ್ ಹಾಗೂ 16 ಲಕ್ಷದ 2 ಸಾವಿರ ರೂ. ಮೌಲ್ಯದ ಡ್ರೈ ರೇಷನ್ ಕಿಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಮಹತ್ತರ ನೆರವು ನೀಡಿದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿಗೆ ಅಭಿನಂದನೆ ಸಲ್ಲಿಸಿದರು. ಇನ್ಫೋಸಿಸ್ ಕೇಂದ್ರಿಯ ಮುಖ್ಯಸ್ಥ ವ್ಯಾಸದೇವ ಕಾಮತ್, ಇನ್ಫೋಸಿಸ್ ಕ್ರಾಂತಿ ಮುಖ್ಯಸ್ಥ ಹರೀಶ್, ಜಿಲ್ಲಾ ವ್ಯವಸ್ಥಾಪಕ ಡಾ. ಕಿಶೋರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಕಂಬಳಿ, ಜಿಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News