×
Ad

​ಸೆಲೂನ್‌ನಲ್ಲಿ ನಿಯಮ ಪಾಲಿಸಲು ಸಚಿವ ಕೋಟ ಸೂಚನೆ

Update: 2020-05-20 18:24 IST

ಮಂಗಳೂರು, ಮೇ 20: ಕೊರೋನ-ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಸೆಲೂನ್‌ಗಳು ಮೇ 19ರಿಂದ ದ.ಕ.ಜಿಲ್ಲಾದ್ಯಂತ ತೆರೆದಿದೆ. ಸೆಲೂನ್ ಮಾಲಕರು ಕೋವಿಡ್-19 ಸಾಂಕ್ರಮಿಕ ರೋಗ ಹಿನ್ನೆಲೆಯಲ್ಲಿ ನಿಯಮಗಳನ್ನು ಈ ಕೆಳಗಿನ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸು ವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

 ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಬುಧವಾರ ಈ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜ್ವರ, ಶೀತ, ಕೆಮ್ಮು ಮತ್ತು ಗಂಟಲು ನೋವು ಇರುವ ವ್ಯಕ್ತಿಗಳಿಗೆ ಪ್ರವೇಶ ನೀಡಬಾರದು. ಮುಖಗವಸು ಇಲ್ಲದೆ ವ್ಯಕ್ತಿಗತವಾಗಿ ನಿರ್ಬಂಧ, ಪ್ರವೇಶ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಬಳಕೆ, ಗ್ರಾಹಕ ಮತ್ತು ಕ್ಷೌರಿಕರ ನಡುವೆ ಕನಿಷ್ಠ 1 ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಸ್ವಚ್ಚತೆ ಕಾಪಾಡಬೇಕು, ಒಬ್ಬರಿಗೆ ಬಳಸಿದ ಬಟ್ಟೆ ಮತ್ತೊಬ್ಬರಿಗೆ ಬಳಸಬಾರದು. ಗ್ರಾಹಕರಿಗೆ ಸೇವೆ ನೀಡುವಾಗ ಮಾಸ್ಕ್ ಮತ್ತು ಕೈಗೆ ಗ್ಲೌವ್ಸ್ ಹಾಕಬೇಕು. ಟೋಕನ್ ವ್ಯವಸ್ಥೆ ನೀಡಿ ಜನಸಾಂಧ್ರತೆಯಾಗದಂತೆ ತಡೆಯಬೇಕು, ಹೇರ್‌ಕಟ್ ಬಳಿಕ ಸಿಬ್ಬಂದಿ ಕೈಗಳನ್ನು ಸ್ಯಾನಿಟೈನ್‌ನಲ್ಲಿ ಕಡ್ಡಾಯವಾಗಿ ತೊಳೆಯಬೇಕು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News