×
Ad

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸಹಾಯವಾಣಿ

Update: 2020-05-20 18:31 IST

ಉಡುಪಿ, ಮೇ 20: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಕೋವಿಡ್-19ರ ಅವಧಿಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳಿಗಾಗಿ ಮೇ 18ರಿಂದ ಸಹಾಯವಾಣಿಯನ್ನು ಪ್ರಾರಂಭಿಸಿದೆ.

ಬಾಲ್ಯ ವಿವಾಹ, ಬಾಲ ಕಾರ್ಮಿಕ, ಮಕ್ಕಳ ಮೆಲೆ ನಡೆಯುವ ಅತ್ಯಾಚಾರ/ಲೈಂಗಿಕ ಕಿರುಕುಳ /ಶೋಷಣೆ, ಮಕ್ಕಳ ಸಾಗಾಟನೆ/ಮಕ್ಕಳ ಮಾರಾಟ/ಮಕ್ಕಳು ಕಾಣೆಯಾಗುವುದು ಮತ್ತು ಶಾಲೆಗಳಿಗೆ ಸಂಬಂದಿಸಿದ ದೂರುಗಳಿಗಾಗಿ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10ರಿಂದ 5ಗಂಟೆಯವರೆಗೆ 080-47181177 ಸಹಾಯವಾಣಿಯನ್ನು ಸಂಪರ್ಕಿಸಿ ಸಾರ್ವಜನಿಕರು ದೂರು ದಾಖಲಿಸಬಹುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ.ಶಂಕರಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News