ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್‌ನಿಂದ ವೈದ್ಯಕೀಯ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ವಿತರಣೆ
Update: 2020-05-20 18:36 IST
ಉಡುಪಿ, ಮೇ 20: ಕೋವಿಡ್-19 ಹಾವಳಿಗೆ ತತ್ತರಿಸಿರುವ ಜನತೆಗೆ ನೆರವಾಗುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ವತಿಯಿಂದ ಬುಧವಾರ ಪಿಪಿಇ ಕಿಟ್‌ಗಳನ್ನು ಹಸ್ತಾಂತರಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ಅವರಿಗೆ ಸಂಘಟನೆಯ ವತಿಯಿಂದ 50 ಪಿಪಿಇ ಕಿಟ್‌ಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಉಡುಪಿ ಜಿಲ್ಲೆ ಇದರ ಗೌರವಾಧ್ಯಕ್ಷ ಡಾ ಜೆರ್ರಿ ವಿನ್ಸೆಂಟ್ ಡಾಯಸ್, ಕಾರ್ಯದರ್ಶಿ ರೊಬರ್ಟ್ ಫುರ್ಟಾಡೊ, ಕೋಶಾಧಿಕಾರಿ ಆಲ್ವಿನ್ ಕ್ವಾಡ್ರಸ್, ಸಹಕಾರ್ಯದರ್ಶಿ ಜೊಯನ್ ಲೂವಿಸ್, ನಿರ್ದೇಶಕರಾದ ಟೆರೆನ್ಸ್ ಸುವಾರಿಸ್, ಲೂಯಿಸ್ ಲೋಬೊ ಉಪಸ್ಥಿತರಿದ್ದರು.