ಸುಧಾರಣೆ ಎಂದರೆ ಖಾಸಗೀಕರಣ ಅಲ್ಲ: ಕಾಂಗ್ರೆಸ್
ಉಡುಪಿ, ಮೇ 20: ಕೇಂದ್ರ ಸರಕಾರ ಸುಧಾರಣೆ ಹೆಸರಲ್ಲಿ ಸಾರ್ವಜನಿಕ ಉದ್ದಿಮೆಗಳನ್ನು ಒಂದೊಂದಾಗಿ ಖಾಸಗೀಕರಣಗೊಳಿಸುತ್ತಿದೆ. ಆರ್ಥಿಕ ಕ್ಷೇತ್ರಕ್ಕೆ ಉತ್ತೇಜನ ನೀಡುವ ನೆಪದಲ್ಲಿ ಈಗಾಗಲೇ ಲಾಭದಲ್ಲಿದ್ದ ಬಿಎಸ್‌ಎನ್‌ಎಲ್, ಬಿಪಿಎಲ್ ಹಾಗೂ ಎಲ್‌ಐಸಿಗಳನ್ನು ಖಾಸಗೀಕರಣಗೊಳಿಸಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್, ಕೇಂದ್ರದ ಕ್ರಮವನ್ನು ಟೀಕಿಸಿದೆ.
ಕಳೆದ ಯುಪಿಎ ಸರಕಾರದ ಅವಧಿಯಲ್ಲಿ ರಕ್ಷಣಾ ಸಾಮಾಗ್ರಿಗಳ ಉತ್ಪಾದನಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಮಿತಿಯನ್ನು ಹೆಚ್ಚಳ ಗೊಳಿಸ ಬೇಕೆಂಬ ಕಾಂಗ್ರೆಸ್ ಪಕ್ಷದ ಪ್ರಸ್ತಾವನೆಯನ್ನು ಬಿಜೆಪಿಯು ರಾಷ್ಟದ ಭದ್ರತೆಯ ಜೊತೆ ರಾಜಿ ಮಾಡಿಕೊಳ್ಳಬಾರದೆಂಬ ನೆಪ ಒಡ್ಡಿ ಬಲ ವಾಗಿ ವಿರೋಧಿಸಿತ್ತು. ಆದರೆ ಈಗ ರಕ್ಷಣಾ ಕ್ಷೇತ್ರದಲ್ಲಿಯೂ ವಿದೇಶಿ ಬಂಡವಾಳ ಹೂಡಿಕೆಯನ್ನು ಶೇ. 49ರಿಂದ ಶೇ.74ಕ್ಕೆ ಹೆಚ್ಚಳ ಮಾಡಿ ಯುಟರ್ನ್ ಹೊಡೆದಿದೆ ಎಂದವರು ಹೇಳಿದ್ದಾರೆ.
ರಕ್ಷಣಾ ಉತ್ಪಾದನೆಯಲ್ಲಿ ಶೇ.50ಕ್ಕಿಂತ ಅಧಿಕ ಎಫ್‌ಡಿಐ ಏರಿಕೆಯಿಂದ ದೇಶದ ಭದ್ರತೆಗೆ ನಿಜವಾಗಿ ಕಂಟಕವಾಗಲಿದೆ. ಬಾಹ್ಯಾಕಾಶ, ವಿದ್ಯುತ್ ವಿತರಣೆ ಹಾಗೂ ಇಂಧನ ಕ್ಷೇತ್ರವನ್ನೂ ಖಾಸಗಿಗೆ ನಿರ್ವಹಿಸಲು ನೀಡುವುದರೊಂದಿಗೆ ಸುಮಾರು 50 ಕಲ್ಲಿದ್ದಲು ನಿಕ್ಷೇಪಗಳನ್ನು ಬಿಡ್ಡಿಂಗ್ ಮೂಲಕ ಖಾಸಗಿ ವಲಯಕ್ಕೆ ಹಂಚಿಕೆ ಮಾಡಲಾಗುತ್ತದೆ. 500 ಗಣಿಗಾರಿಕೆ ಬ್ಲಾಕ್‌ಗಳನ್ನು ಹರಾಜು ಹಾಲಾಗುತ್ತಿದೆ ಎಂದವರು ದೂರಿದರು.
ತೈಲ, ಇಂಧನ, ವಾಯುಯಾನ, ಬ್ಯಾಂಕಿಂಗ್ ಹೀಗೆ ಸರಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ ಸರಕಾರದ ಸಾಧನೆಯೂ ಅಲ್ಲ, ಸುಧಾ ರಣೆಯೂ ಅಲ್ಲ. ಅದು ಸರಕಾರದ ಆಡಳಿತ ವೈಫಲ್ಯದ ಸಂಕೇತ ಎಂದು ಭಾಸ್ಕರ ರಾವ್ ಕಿದಿಯೂರು,ದೇಶದ ಪ್ರತಿಯೊಂದು ವಲಯವನ್ನೂ ಖಾಸಗಿಗೆ ಮುಕ್ತವಾಗಿಸುವ ಕೇಂದ್ರದ ಡೆಯನ್ನು ಟೀಕಿಸುತ್ತಾ ನುಡಿದಿದ್ದಾರೆ.