×
Ad

ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 61ಕ್ಕೇರಿಕೆ

Update: 2020-05-21 14:46 IST

ಮಂಗಳೂರು, ಮೇ 21: ದ.ಕ. ಜಿಲ್ಲೆಯಲ್ಲಿ ಗುರುವಾರ ಮತ್ತೆ 6 ಕೊರೋನ ಸೋಂಕು ಪ್ರಕರಣ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 61ಕ್ಕೇರಿದೆ. ಆ ಪೈಕಿ ದ.ಕ.ಜಿಲ್ಲೆಯ 49, ಉತ್ತರ ಕನ್ನಡ 2, ಮುಂಬೈ 2, ಕಾರ್ಕಳ 3, ಕಲಬುರಗಿ 1 ಹಾಗೂ ಕಾಸರಗೋಡು ಜಿಲ್ಲೆಯ 4 ಪ್ರಕರಣಗಳು ಸೇರಿವೆ.

ಮೇ 18ರಂದು ದುಬೈಯಿಂದ ವಿಶೇಷ ವಿಮಾನದಲ್ಲಿ 178 ಮಂದಿ ಮಂಗಳೂರಿಗೆ ಆಗಮಿಸಿದ್ದು, ಆ ಪೈಕಿ 110 ಮಂದಿಯನ್ನು ನಗರದಲ್ಲಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಅವರ ಗಂಟಲಿನ ದ್ರವದ ಮಾದರಿಯ ಪರೀಕ್ಷೆಯು ಗುರುವಾರ ಬಂದಿದೆ. ಅದರಲ್ಲಿ 6 ಮಂದಿಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಪುರುಷರಾಗಿದ್ದಾರೆ.

ದ.ಕ. ಜಿಲ್ಲೆಯ 60, 44, 42, 44, 35 ವರ್ಷ ಪ್ರಾಯದ ಪುರುಷರು ಮತ್ತು ಕಲಬುರಗಿಯ ಯ 29 ವರ್ಷದ ಯುವಕನೋರ್ವನಲ್ಲಿ ಸೋಂಕು ದೃಢಪಟ್ಟಿವೆ. ಕ್ವಾರಂಟೈನ್‌ನಲ್ಲಿದ್ದ ಇವರನ್ನು ಇದೀಗ ವೆನ್ಲಾಕ್‌ನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ದ.ಕ. ಜಿಲ್ಲಾಡಳಿತದ ಕಟ್ಟೆಚ್ಚರದಿಂದಾಗಿ ನಿಯಂತ್ರಣದಲ್ಲಿದ್ದ ಸೋಂಕು ಪ್ರಕರಣವು ಲಾಕ್‌ಡೌನ್ ಸಡಿಲಿಕೆಯ ಬಳಿಕ ಹೆಚ್ಚತೊಡಗಿದೆ. ಅಂದರೆ ಲಾಕ್‌ಡೌನ್‌ಗೆ ಮುನ್ನ ಕೇವಲ 24 ಸೋಂಕು ಪ್ರಕರಣ ದಾಖಲಾಗಿತ್ತು. ಲಾಕ್‌ಡೌನ್ ಬಳಿಕ ಹೊರ ರಾಜ್ಯ ಮತ್ತು ವಿದೇಶದಿಂದ ಆಗಮಿಸಿದ ಪ್ರಯಾಣಿಕರಲ್ಲಿ ಸೋಂಕು ಕಾಣಿಸಿಕೊಳ್ಳತೊಡಗಿದೆ. ಇದು ಜಿಲ್ಲಾಡಳಿತಕ್ಕೆ ಹೊಸ ಸಮಸ್ಯೆಯನ್ನು ಸೃಷ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News