ಮಂಗಳೂರು: ಬಿಸಿಸಿಐ ವತಿಯಿಂದ ಈದ್ ಕಿಟ್ ವಿತರಣೆ
Update: 2020-05-21 17:43 IST
ಮಂಗಳೂರು, ಮೇ. 21: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಮಂಗಳೂರು ಇದರ ವತಿಯಿಂದ ನಗದು ಮೊತ್ತವನ್ನು ಒಳಗೊಂಡ ಸುಮಾರು 250 ಈದ್ ಕಿಟ್ ಗಳ ವಿತರಣೆಯ ಕಾರ್ಯಕ್ರಮವು ನಗರದ ಕಂಕನಾಡಿಯಲ್ಲಿರುವ ಬಿಸಿಸಿಐ ಇದರ ಆಡಳಿತ ಕಚೇರಿಯಲ್ಲಿ ಬುಧವಾರ ಹಮ್ಮಿ ಕೊಳ್ಳಲಾಯಿತು.
ಅವಶ್ಯಕತೆಯುಳ್ಳ ಎಲ್ಲಾ ಅರ್ಹ ಜನಗಳಿಗೆ ಕಿಟ್ ಗಳನ್ನು ತಲುಪಿಸುವ ಹೊಣೆಯನ್ನು ಬಿಸಿಸಿಐ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಒಪ್ಪಿಕೊಂಡು ಮುತುವರ್ಜಿ ವಹಿಸಿದ್ದು ಅರ್ಹ ಕುಟುಂಬಗಳನ್ನು ಗುರುತಿಸಿ ವಿತರಿಸಲು ನಿರ್ಧರಿಸಲಾಯಿತು.
ಈ ಸಂದರ್ಭ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಅಧ್ಯಕ್ಷರಾದ ಹಾಜಿ.ಎಸ್.ಎಂ. ರಶೀದ್ ,ಉಪಾಧ್ಯಕ್ಷರಾದ ಅಬ್ದುಲ್ ರವೂಪ್ ಪುತ್ತಿಗೆ, ಕಾರ್ಯದರ್ಶಿ ನಿಸಾರ್ ಫಕೀರ್ ಮಹಮ್ಮದ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮಮ್ತಾಝ್ ಅಲಿ ಬಿ.ಎಮ್., ಮಹಮ್ಮದ್ ಹಾರಿಸ್, ಮಹಮ್ಮದ್ ಶರೀಪ್, ಆಸಿಪ್ ಸೂಫಿಖಾನ್ ಮುಂತಾದವರು ಉಪಸ್ಥಿತರಿದ್ದರು.