×
Ad

ಮಾಹಿತಿ ತಂತ್ರಜ್ಞಾನ ಪಿತಾಮಹ ರಾಜೀವ್ ಗಾಂಧಿ: ಸಭಾಪತಿ

Update: 2020-05-21 21:36 IST

ಉಡುಪಿ, ಮೇ 21: ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಆಶ್ರಯದಲ್ಲಿ ರಾಜೀವ್ ಗಾಂಧಿಯವರ 29ನೇ ಪುಣ್ಯತಿಥಿ ಕಾರ್ಯಕ್ರಮವನ್ನು ಇಂದು ಉಡುಪಿ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿತ್ತು.

ಮಾಜಿ ಶಾಸಕ ಯು.ಆರ್.ಸಭಾಪತಿ ಮಾತನಾಡಿ, ಇಂದು ಅಂಗೈಯಲ್ಲಿ ವಿಶ್ವವನ್ನು ತಲುಪಲು ಸಾಧ್ಯವಾಗುವಂತಹ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ. ಇಂದಿನ ಡಿಜಿಟಲ್ ಇಂಡಿಯಾ ಅನ್ನುವ ಒಂದು ದೊಡ್ಡ ಬೊಬ್ಬೆಗೆ ಕಾರಣೀಕರ್ತರಾದ ರಾಜೀವ್ ಗಾಂಧಿಯವರನ್ನು ಇದನ್ನು ಪ್ರಚಾರ ಮಾಡುವ ನಾಯಕರುಗಳು ಮರೆತು ಬಿಟ್ಟಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ವಿಕೇಂದ್ರೀಕರಿಸುವುದರ ಮೂಲಕ ತಳ ಹಂತದ ಪ್ರತಿನಿಧಿಗಳು ಸರಕಾರ ರಚನೆಯ ಕಾರ್ಯದಲ್ಲಿ ಭಾಗವಹಿಸುವಂತೆ ಸಂವಿಧಾನದ ತಿದ್ದುಪಡಿಯ ಮೂಲಕ ಗ್ರಾಪಂ ತಾಪಂ ಜಿಪಂಗಳಿಗೆ ಶಕ್ತಿಯನ್ನು ತುಂಬುವ ಕೆಲಸವನ್ನು ಅವರು ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವೆರೋನಿಕಾ ಕರ್ನೇಲಿಯೋ, ರಮೇಶ್ ಕಾಂಚನ್, ಹರೀಶ್ ಕಿಣಿ, ಉದ್ಯಾವರ ನಾಗೇಶ್ ಕುಮಾರ್, ಮಹಾಬಲ ಕುಂದರ್, ಲೂಯಿಸ್ ಲೋಬೋ, ಜಯಶ್ರೀ ಶೇಟ್, ಜನಾರ್ದನ ಭಂಡಾರ್ಕಾರ್, ಜಿತೇಶ್ ಕುಮಾರ್, ಅಶೋಕ್ ಸುವರ್ಣ, ಉಪೇಂದ್ರ ಗಾಣಿಗ, ವೆಂಕಟೇಶ್ ಪೆರಂಪಳ್ಳಿ, ಸುಧನ್ವ ಶೆಟ್ಟಿ, ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಘಟನೆಯ ಜಿಲ್ಲಾ ಉಸ್ತುವಾರಿ ಡಾ.ಸುನೀತಾ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News