×
Ad

ಮರಳು ಸಾಗಾಟ, ಹಫ್ತಾ ಬೇಡಿಕೆ ಪ್ರಕರಣ: ತನಿಖೆಗೆ ಆಗ್ರಹ

Update: 2020-05-21 21:37 IST

ಉಡುಪಿ, ಮೇ 21: ಉಡುಪಿ-ದ.ಕ. ಜಿಲ್ಲೆಯ ಗಡಿ ಭಾಗವಾಗಿರುವ ಸಂಕಲಕರಿಯ ಚೆಕ್‌ಪೋಸ್ಟ್ನಲ್ಲಿ ಕಳೆದ ರವಿವಾರ ಮರಳು ಸಾಗಾಣಿಕೆಯ ಲಾರಿ ಚಾಲಕ, ಮಾಲಕರ ಮೇಲೆ ಹಲ್ಲೆ, ದಾಂಧಲೆ ನಡೆಸಿ ಹಫ್ತಾ ಬೇಡಿಕೆ ಒಡ್ಡಿದ ಪ್ರಕರಣದ ಕುರಿತು ನಿಷ್ಪಕ್ಷವಾದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ವಿಭಾಗದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ಉಡುಪಿ ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರನ್ನು ಒತ್ತಾಯಿಸಿದ್ದಾರೆ.

 ಈ ಸಂಬಂಧ ಮೊಯಿದಿನಬ್ಬ ಇಂದು ಇಬ್ಬರೂ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿ, ಅಪರಾಧಿಗಳು ಯಾರೇ ಆಗಿದ್ದರೂ ಯಾವ ಪ್ರಭಾವಕ್ಕೂ ಒಳಗಾಗದೆ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಭವಿಷ್ಯದಲ್ಲಿ ಈ ರೀತಿಯ ಕಾನೂನು ಬಾಹಿರ ಚಟುವಟಿಕೆ ಗಳು ನಡೆಯದಂತೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ. ಮನವಿಯ ಪ್ರತಿಗಳನ್ನು ಅವರು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಇ-ಮೇಲ್ ಮೂಲಕ ರವಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News