ಅಕ್ರಮ ಮರಳುಗಾರಿಕೆ ನಡೆಸಿದವರನ್ನು ಶಿಕ್ಷಿಸಿ: ಸಿಪಿಎಂ ಆಗ್ರಹ
ಉಡುಪಿ, ಮೇ 21: ಹಿರಿಯಡ್ಕ ಸ್ವರ್ಣ ನದಿಯಲ್ಲಿ ಹೂಳೆತ್ತುವ ನೆಪದಲ್ಲಿ ಅಕ್ರಮ ಮರಳುಗಾರಿಕೆ ನಡೆಸಿದ ತಪ್ಪಿತಸ್ಥರನ್ನು ಕೂಡಲೇ ಶಿಕ್ಷಿಸಬೇಕು ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಅಕ್ರಮ ಮರಳುಗಾರಿಕೆ ಮಾಡುವವರು ಕೃತಕ ಅಭಾವ ಸೃಷ್ಟಿಸುತ್ತಾರೆ. ಆ ಮೂಲಕ ಸೂಪರ್ ಲಾಭ ಗಳಿಸುತ್ತಾರೆ. ಲಾಕ್‌ಡೌನ್ ಸಡಿಲಿಕೆ ಸಂದರ್ಭದಲ್ಲಿ ಅಕ್ರಮ ಮರಳುಗಾರಿಕೆ ನಡೆದಿರುವುದನ್ನು ಗಮನಿಸಿದರೆ, ಪ್ರಭಾವಿ ವ್ಯಕ್ತಿಗಳು ಇವರ ಬೆಂಬಲಕ್ಕೆ ಇದ್ದಾರೆ ಎಂಬುದು ಸ್ಪಷ್ಟವಾ ಗುತ್ತದೆ ಎಂದು ಸಮಿತಿ ದೂರಿದೆ.
ಒಂದೆಡೆ ಅಕ್ರಮ ಮರಳುಗಾರಿಕೆ ನಡೆದರೆ, ಇನ್ನೊಂದೆಡೆಯಲ್ಲಿ ಮರಳು ಗಾರಿಕೆಗೆ ಲೈಸೆನ್ಸ್ ಪಡೆದವರು ಕಾರ್ಮಿಕರು ಸಿಗುತ್ತಿಲ್ಲ ಎಂಬ ನೆಪ ವೊಡ್ಡಿ ಮರಳು ತೆಗೆಯುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಜನರಿಗೆ ತೊಂದರೆ ಯಾಗಿದೆ. ಸ್ಥಳೀಯವಾಗಿ ಮರಳು ತೆಗೆಯುವ ಕಾರ್ಮಿಕರು ಸಾಕಷ್ಟಿದ್ದಾರೆ. ಅವರ ಮೂಲಕ ಮರಳು ತೆಗೆಯಲು ಜಿಲ್ಲಾಡಳಿತ ಒತ್ತಾಯಿಸಬೇಕು ಎಂದು ಸಿಪಿಐಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.