ಮನೆಯಲ್ಲಿಯೇ ಈದ್ ನಮಾಝ್ ನಿರ್ವಹಿಸಲು ಕರೆ

Update: 2020-05-21 16:10 GMT

ಉಡುಪಿ, ಮೇ 21: ಕೊರೋನ ಲಾಕ್‌ಡೌನ್ 4ನೆ ಹಂತದಲ್ಲಿರುವ ಸಂದರ್ಭದಲ್ಲಿ ಬಂದಿರುವ ಈದುಲ್ ಫಿತ್ರ್ ನಮಾಝ್ ಅನ್ನು ಅಲ್ ಮಜ್ಲೀಸ್ ಉಲ್ ಇಲ್ಮಿ ಲಿತ್ ತೌಜೀಹ್ ವಲ್ ಇರ್ಷಾದ್ ವಿದ್ವಾಂಸರ ಕಮಿಟಿಯ ಮಾರ್ಗದರ್ಶದಂತೆ ಎರಡು ರಕಅತ್ ಈದ್ಗಾ/ಮಸೀದಿಯಲ್ಲಿ ನಿರ್ವಹಿಸುವ ರೀತಿಯಲ್ಲಿ ಈ ಬಾರಿ ತಮ್ಮ ತಮ್ಮ ಮನೆಗಳಲ್ಲಿ ನಿರ್ವಹಿಸಿ (ಈದ್ ಖುತ್ಬಾ ಹೊರತುಪಡಿಸಿ) ಹಬ್ಬ ಆಚರಿಸಬೇಕು ಹಾಗೂ ಬಡವರಿಗೆ ಅದಷ್ಟು ಸಹಾಯ ಮಾಡಬೇಕು ಎಂದು ಜಮೀಯತೆ ಅಹ್ಲೆ ಹದೀಸ್ ಉಡುಪಿ ಜಿಲ್ಲೆ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News