ಹೆಬ್ರಿಯಲ್ಲಿ ಕೊರೋನ ಸೋಂಕು: ಪ್ರದೇಶ ಸೀಲ್‌ಡೌನ್

Update: 2020-05-21 16:15 GMT

 ಹೆಬ್ರಿ, ಮೇ 21: ಹೆಬ್ರಿಯ ಹೊಟೇಲೊಂದರಲ್ಲಿ ಕ್ವಾರಂಟೈನ್‌ನಲ್ಲಿದ್ದ ಮುಂಬಯಿಯಿಂದ ಬಂದ ಇಬ್ಬರು ಮಹಿಳೆಯರಲ್ಲಿ ಬುಧವಾರ ಕೊರೋನ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಹಾಗೂ ಹೆಬ್ರಿಯ ಕುಚ್ಚೂರು ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ಹೆಬ್ರಿಯ ಈ ರೆಸಿಡೆನ್ಸಿ ಹಾಗೂ ರೆಸಿಡೆನ್ಸಿ ಸಂಪರ್ಕ ರಸ್ತೆಯನ್ನು ಸುಮಾರು 300ಮೀ.ನಷ್ಟು ಸೀಲ್‌ಡೌನ್ ಮಾಡಲಾಗಿದ್ದು, ಇದರ ಆಸುಪಾಸು ಯಾರಿಗೂ ಸುಳಿಯಲು ಪೊಲೀಸರು ಅವಕಾಶ ನೀಡುತ್ತಿಲ್ಲ. ಸಾರ್ವಜನಿಕರಿಗೆ ಈ ಪ್ರದೇಶ ನಿಷೇಧಿತವಾಗಿದೆ.
ಮುಂಬೈಯಿಂದ ಬಂದ ಈ ಮಹಿಳೆಯರ ಗಂಟಲು ದ್ರವ ಮಾದರಿ ಬುಧವಾರ ಪಾಸಿಟಿವ್ ಆಗಿದ್ದು, ಜಿಲ್ಲಾಡಳಿತ ಇವರನ್ನು ಈಗಾಗಲೇ ಉಡುಪಿ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಿದೆ. 31 ವರ್ಷ ಪ್ರಾಯದ ಮಹಿಳೆಗೆ (ಪಿ-1436) 24 ಮಂದಿ ಹಾಗೂ 47ರ ಹರೆಯದ ಮಹಿಳೆಗೆ (ಪಿ-1449) ಒಟ್ಟು 12 ಮಂದಿ ಪ್ರಥಮ ಸಂಪರ್ಕಿತರನ್ನು ಆರೋಗ್ಯ ಇಲಾಖೆ ಗುರುತಿಸಿದ್ದು, ಇವರಿಗೂ ಕ್ವಾರಂಟೈನ್ ವಿಧಿಸಲಾಗಿದೆ ಅಲ್ಲದೇ ಅವರ ಮಾದರಿ ಪರೀಕ್ಷೆಗೂ ಕ್ರಮಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News