ಹೆಬ್ರಿ ಕೊರೋನ ಪಾಸಿಟಿವ್ ಪ್ರಕರಣ; ಲಾಡ್ಜ್ ಮೇಲ್ವಿಚಾಕರಿಂದ ನಿಯಮ ಉಲ್ಲಂಘನೆ: ದೂರು

Update: 2020-05-21 16:26 GMT

ಹೆಬ್ರಿ, ಮೇ 21: ಕ್ವಾರಂಟೇನ್‌ನಲ್ಲಿರದೆ ಮನೆ ಪರಿಸರದಲ್ಲಿ ತಿರುಗಾಡುತ್ತಿದ್ದ ಇಬ್ಬರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ರಿಯ ಲಾಡ್ಜ್ವೊಂದರಲ್ಲಿ ಕ್ವಾರಂಟೈನ್‌ಲ್ಲಿರುವ ಇಬ್ಬರಿಗೆ ಮೇ20ರಂದು ಕೋರೋನಾ ಪಾಸಿಟಿವ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಲಾಡ್ಜ್‌ನ್ನು ಸೀಲ್ ಡೌನ್ ಮಾಡಿ ಎಲ್ಲರನ್ನು ಕ್ವಾರಂಟೇನ್‌ನಲ್ಲಿ ಇರಿಸಲಾಗಿತ್ತು. ಆದರೆ ಲಾಡ್ಜ್ ನ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ ವಿಠಲ ಹೆಗ್ಡೆ ಮತ್ತು ಅವರ ಮಗಳು ತೃಪ್ತಿ ಹೆಗ್ಡೆ ಲಾಡ್ಜ್ನಲ್ಲಿ ಕ್ವಾರಂಟೈನ್ನಲ್ಲಿರದೇ ಅವರ ಮನೆಯಾದ ನಾಡ್ಪಾಲು ಗ್ರಾಮದ ಸೀತಾನದಿಯ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ದೂರಲಾಗಿದೆ.

ಇವರು ಪರಿಸರದಲ್ಲಿ ತಿರುಗಾಡುತ್ತಿರುವುದರಿಂದ ಇವರುಗಳನ್ನು ಕ್ವಾರಂಟೈನ್ ಮಾಡಲು ಸಿ.ಎಚ್.ಓ ಸೂಚಿಸಿರುವ ಹಿನ್ನೆಲೆಯಲ್ಲಿ ರಾತ್ರಿ 9:30ರ ಸುಮಾರಿಗೆ ಸಿಬ್ಬಂದಿ ಹಾಗೂ ಅರ್ಜಿದಾರ ರತ್ನಾಕರ ಶೆಟ್ಟಿ ಸೀತಾನದಿಗೆ ಹೋಗಿ ದ್ದರು. ಅಲ್ಲಿ ಆರೋಪಿತರು ಜಿಲ್ಲಾಧಿಕಾರಿ ಆದೇಶ ವನ್ನು ಉಲ್ಲಂಘನೆ ಮಾಡಿ ನಿರ್ಲಕ್ಷ ತನವನ್ನು ತೋರಿರುವುದು ಕಂಡುಬಂದಿದೆ ಎಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News