ಕ್ವಾರಂಟೈನ್ ಬಗ್ಗೆ ನಿರ್ಲಕ್ಷ: ಲಾಡ್ಜ್ ಮಾಲಕರ ವಿರುದ್ಧ ಪ್ರಕರಣ

Update: 2020-05-21 16:29 GMT

ಹೆಬ್ರಿ, ಮೇ 21: ಇಲ್ಲಿನ ಲಾಡ್ಜ್ ಒಂದರಲ್ಲಿ ಕ್ವಾರಂಟೈನ್‌ನಲ್ಲಿದ್ದ ಮುಂಬಯಿ ಯಿಂದ ಬಂದಿದ್ದ ಇಬ್ಬರು ಮಹಿಳೆಯರು ಪಾಸಿಟಿವ್ ಬಂದಿದ್ದರೂ, ಲಾಡ್ಜ್‌ನ ಮಾಲಕ ವಿಠಲ ಹೆಗ್ಡೆ ಹಾಗೂ ಅವರ ಮಗಳು ತೃಪ್ತಿ ಹೆಗ್ಡೆ ಲಾಡ್ಜ್‌ನಲ್ಲಿ ಕ್ವಾರಂಟೈನ್‌ನಲ್ಲಿರದೇ, ಅಧಿಕಾರಿಗಳು ಹೇಳಿದರೂ ಸೂಚನೆ ಪಾಲಿಸದೇ, ನಾಡ್ಪಾಲು ಗ್ರಾಮದ ಸೀತಾನದಿಯ ಮನೆಯ ಪರಿಸರದಲ್ಲಿ ತಿರುಗಾಡುತಿದ್ದು, ಇದರಿಂದ ಕೊರೋನ ಸೋಂಕು ಪಸರಿಸುವ ಅಪಾಯವಿರುವುದಾಗಿ ಕಬ್ಬಿನಾಲೆ ಗ್ರಾಮದ ಚಂದ್ರಹಾಸ ಶೆಟ್ಟಿಗಾರ್ ಎಂಬವರು ನೀಡಿದ ದೂರಿನಲ್ಲಿ ಇಬ್ಬರ ವಿರುದ್ಧ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News