ರವಿವಾರ ರಮಝಾನ್ ಹಬ್ಬವಾದರೆ ಕರ್ಫ್ಯೂ ಸಡಿಲಿಸಿ: ಕೇಂದ್ರ ಜುಮಾ ಮಸ್ಜಿದ್ ವತಿಯಿಂದ ದ.ಕ.ಡಿಸಿಗೆ ಮನವಿ

Update: 2020-05-21 17:10 GMT

ಮಂಗಳೂರು, ಮೇ 21: ಪವಿತ್ರ ರಮಝಾನ್ (ಈದುಲ್ ಫಿತ್ರ್) ಹಬ್ಬವು ಮೇ24ರಂದು ಆದರೆ, ಆ ದಿನ ಕರ್ಫ್ಯೂ (ಲಾಕ್‌ಡೌನ್) ಸಡಿಲಿಸಬೇಕು ಎಂದು ನಗರದ ಬಂದರ್‌ನ ಮಸ್ಜಿದ್ ಝೀನತ್ ಬಕ್ಷ್ ಮತ್ತು ಈದ್ಗಾ ಮಸೀದಿಯ ವತಿಯಿಂದ ದ.ಕ. ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ.

ಶುಕ್ರವಾರ ಮುಸ್ಸಂಜೆ ಚಂದ್ರದರ್ಶನವಾದರೆ ಶನಿವಾರ ರಮಝಾನ್ ಹಬ್ಬ ಆಚರಿಸಲಾಗುತ್ತದೆ. ಆದರೆ ಶುಕ್ರವಾರ ಚಂದ್ರದರ್ಶನವಾಗದಿದ್ದಲ್ಲಿ ಮೇ 24ರ ರವಿವಾರ ಹಬ್ಬ ನಡೆಯಲಿದೆ. ಈಗಾಗಲೆ ಮೇ 24ರಂದು ದಿನವಿಡೀ ರಾಜ್ಯ ಸರಕಾರ ಕರ್ಫ್ಯೂ(ಲಾಕ್‌ಡೌನ್) ಘೋಷಿಸಿದೆ. ಹಬ್ಬದ ದಿನದಂದು ಕರ್ಫ್ಯೂ ಆದರೆ ಮುಸ್ಲಿಂ ಸಮುದಾಯದವರಿಗೆ ಅಗತ್ಯ ಆಹಾರ ಸಾಮಗ್ರಿಗಳ ಖರೀದಿಗೆ ಹಾಗೂ ಕುಟುಂಬಸ್ಥರನ್ನು ಸಂದರ್ಶಿಸಿ ಶುಭ ಹಾರೈಸಲು ಸಾಧ್ಯವಾಗುತ್ತಿಲ್ಲ. ಅಂದು ವಾಹನ ಸಂಚಾರವನ್ನೂ ತಡೆ ಹಿಡಿಯಲಿರುವುದರಿಂದ ತುಂಬಾ ತೊಂದರೆಯಾಗಲಿದೆ. ಹಾಗಾಗಿ ರವಿವಾರ ಹಬ್ಬವಾದರೆ ಅಂದು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಲಾಕ್‌ಡೌನ್ ಸಡಿಲಿಕೆ ಮಾಡಿ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಅಧ್ಯಕ್ಷ ಹಾಜಿ ವೈ ಅಬ್ದುಲ್ಲ ಕುಂಞಿ ಹಾಗೂ ಆಡಳಿತ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News