ಅಂಫಾನ್ ಚಂಡಮಾರುತದಿಂದ 1.9 ಕೋಟಿ ಮಕ್ಕಳಿಗೆ ಸಂಕಷ್ಟ: ಯುನಿಸೆಫ್ ಎಚ್ಚರಿಕೆ

Update: 2020-05-21 17:28 GMT

ವಿಶ್ವಸಂಸ್ಥೆ, ಮೇ 21: ಬಾಂಗ್ಲಾದೇಶ ಮತ್ತು ಭಾರತದ ಕನಿಷ್ಠ 1.9 ಕೋಟಿ ಮಕ್ಕಳು ಅಂಫಾನ್ ಚಂಡಮಾರುತದ ದುಷ್ಪರಿಣಾಮಗಳನ್ನು ಎದುರಿಸಬೇಕಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಘಟಕ ಯುನಿಸೆಫ್ ಎಚ್ಚರಿಸಿದೆ. ಚಂಡಮಾರುತದಿಂದಾಗಿ ಉದ್ಭವಿಸುವ ದಿಢೀರ್ ಪ್ರವಾಹ ಮತ್ತು ಭಾರೀ ಮಳೆ ಮಕ್ಕಳಿಗೆ ಅಪಾಯಕಾರಿಯಾಗಿದೆ ಎಂದು ಅದು ಹೇಳಿದೆ.

ಭೀಕರ ಚಂಡಮಾರುತವು ಬುಧವಾರ ಭಾರತ ಮತ್ತು ಬಾಂಗ್ಲಾದೇಶಗಳ ತೀರಕ್ಕೆ ಅಪ್ಪಳಿಸಿದೆ ಹಾಗೂ ಭಾರೀ ಪ್ರಮಾಣದಲ್ಲಿ ವಿನಾಶವನ್ನು ಸೃಷ್ಟಿಸಿದೆ. ಎರಡೂ ದೇಶಗಳಲ್ಲಿ ನೂರರಷ್ಟು ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News