ಲಾಕ್‌ಡೌನ್: ಭಾರತ, ಆಫ್ರಿಕದ ಹಲವು ಮಹಿಳೆಯರಿಗೆ ಸ್ಯಾನಿಟರಿ ಉತ್ಪನ್ನಗಳ ಅಲಭ್ಯತೆ

Update: 2020-05-21 18:01 GMT

ಹೊಸದಿಲ್ಲಿ, ಮೇ 21: ಲಾಕ್‌ಡೌನ್ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಾಮುದಾಯಿಕ ಸಂಘಟನೆಗಳ ಮುಚ್ಚುಗಡೆಯಿಂದಾಗಿ ಭಾರತ ಹಾಗೂ ಆಫ್ರಿಕದ ಹಲವಾರು ಮಹಿಳೆಯರಿಗೆ ಋತುಸ್ರಾವದ ಸಂದರ್ಭದಲ್ಲಿ ಶುಚಿತ್ವವನ್ನು ಕಾಪಾಡಲು ನೆರವಾಗುವ ಉತ್ಪನ್ನಗಳು ಲಭ್ಯವಾಗಿಲ್ಲವೆಂದು ಇತ್ತೀಚಿನ ಸಮೀಕ್ಷಾ ವರದಿಯೊಂದು ತಿಳಿಸಿದೆ.

ಭಾರತೀಯ ಋತುಸ್ರಾವ ಆರೋಗ್ಯಕ್ಕಾಗಿನ ಒಕ್ಕೂಟ ಆಯೋಜಿಸಿದ ಈ ಸಮೀಕ್ಷೆಯನ್ನು ಕೊರೋನ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಪರಿಹಾರ ಕಾರ್ಯದ ವಿವಿಧ ಸ್ತರಗಳಲ್ಲಿ ಪಾಲ್ಗೊಂಡಿದ್ದ 67 ಸಂಘಟನೆಳು ನಡೆಸಿದ್ದವು. ಈ ಪೈಕಿ 45 ಸಂಘಟನೆಗಳು ಭಾರತದಲ್ಲಿ ಹಾಗೂ 16 ಆಫ್ರಿಕ ಖಂಡದಲ್ಲಿ ಮತ್ತು ಇತರ 6 ಉಳಿದ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಕೊರೋನ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಮಹಿಳೆಯರಿಗೆ ಅವರ ಋತುಸ್ರಾವದ ನೈರ್ಮಲ್ಯತೆ ಕಾಪಾಡುವ ಉತ್ಪನ್ನಗಳ ಉತ್ಪಾದನೆ, ವಿತರಣೆ ಹಾಗೂ ಲಭ್ಯತೆಯ ಸ್ಥಿತಿಗತಿಯನ್ನು ಅಂದಾಜಿಸಲು ಈ ಸಮೀಕ್ಷೆಯನ್ನು ಆಯೋಜಿಸಲಾಗಿತ್ತು.

 ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡ 62 ಮಹಿಳೆಯರು ಲಾಕ್‌ಡೌನ್ ಸಂದರ್ಭದಲ್ಲಿ ತಮಗೆ ಋತುಸ್ರಾವದ ಶುಚಿತ್ವವನ್ನು ಕಾಪಾಡುವ ಉತ್ಪನ್ನಗಳನ್ನು ನಿಯಮಿತ ಸೌಲಭ್ಯಗಳ ಮೂಲಕ ಪಡೆಯುವುದು ಸವಾಲುದಾಯಕವಾಗಿತ್ತೆಂದು ಉತ್ತರಿಸಿದ್ದಾರೆ. ಇತರ 22 ಮಂದಿ ತಮಗೆ ಈ ಉತ್ಪನ್ನಗಳು ದೊರಯಲೇ ಇಲ್ಲವೆಂದು ತಿಳಿಸಿದ್ದಾರೆ.

 ಲಾಕ್‌ಡೌನ್‌ನಿಂದಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ನಂತಹ ಋತುಸ್ರಾವದ ಶುಚಿತ್ವ ಕಾಪಾಡುವ ಉತ್ಪನ್ನಗಳ ತಯಾರಿ ತೀವ್ರವಾಗಿ ಬಾಧಿತವಾಗಿವೆಯೆಂದು ಸಮೀಕ್ಷೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News