ಉಡುಪಿ: 216 ಕೊರೋನ ಸ್ಯಾಂಪಲ್‌ಗಳ ವರದಿ ನೆಗೆಟಿವ್
Update: 2020-05-22 14:31 IST
ಉಡುಪಿ, ಮೇ 22: ಸತತ ಎರಡು ದಿನ 30ಕ್ಕೂ ಅಧಿಕ ಪಾಸಿಟಿವ್ ಕೇಸುಗಳೊಂದಿಗೆ ಜಿಲ್ಲೆಯಲ್ಲಿ ಆತಂಕ ಮೂಡಿಸಿದ್ದ ಕೊರೋನ ವೈರಸ್ ಸೋಂಕು, ಇಂದು ಬೆಳಗಿನ ವರದಿಯಲ್ಲಿ ಉಡುಪಿಯಲ್ಲಿ ಕಾಣಿಸಿಕೊಳ್ಳದೇ ಇರುವುದು ಅಲ್ಪಸಮಾಧಾನಕ್ಕೆ ಕಾರಣವಾಯಿತು.
ಜಿಲ್ಲೆಯಲ್ಲಿ ನಿನ್ನೆ ಕಳುಹಿಸಿದ್ದ 653 ಮಂದಿಯ ಗಂಟಲು ದ್ರವದ ಮಾದರಿಯೂ ಸೇರಿದಂತೆ ಒಟ್ಟು 1487 ಸ್ಯಾಂಪಲ್‌ಗಳ ವರದಿ ಬರಲು ಬಾಕಿ ಇದ್ದು, ಇಂದು ಬೆಳಗ್ಗೆ ಇವುಗಳಲ್ಲಿ 216 ಮಂದಿಯ ವರದಿ ಬಂದಿವೆ. ಇವೆಲ್ಲವೂ ನೆಗೆಟಿವ್ ಆಗಿವೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಇನ್ನು ಸಂಜೆಯ ವೇಳೆಗೆ ಇನ್ನಷ್ಟು ಸ್ಯಾಂಪಲ್‌ಗಳ ವರದಿ ಬರುವ ಸಾಧ್ಯತೆ ಇದ್ದು, ಅವುಗಳ ಫಲಿತಾಂಶಗಳ ಕುರಿತು ಈಗಲೇ ಹೇಳುವಂತಿಲ್ಲ ಎಂದು ಮೂಲ ತಿಳಿಸಿದೆ. ಆದರೆ ಜಿಲ್ಲೆಯಲ್ಲಿ ಪಾಸಿಟಿವ್ ಕೇಸುಗಳ ಸಂಖ್ಯೆಯಲ್ಲಿ ಭಾರೀ ವೃದ್ಧಿಯಾಗುವ ಸಾಧ್ಯತೆಯನ್ನು ಈ ಮೂಲಗಳು ಅಲ್ಲಗೆಳೆಯುತ್ತಿಲ್ಲ.