ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ವತಿಯಿಂದ ಮನೆ ಬಾಗಿಲಿಗೇ ವೈದ್ಯಕೀಯ ಸೇವೆಗಳು

Update: 2020-05-22 12:01 GMT

ಕೊಣಾಜೆ: ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರು ತಮ್ಮ ಮನೆಯಲ್ಲಿಯೇ ಇದ್ದು ಸುರಕ್ಷಿತವಾಗಿರಬೇಕೆಂದು ಉದ್ದೇಶದಿಂದ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ವತಿಯಿಂದ ವೈದ್ಯಕೀಯ ಸೇವೆಗಳನ್ನು  ಮನೆ ಬಾಗಿಲಿಗೇ ಒದಗಿಸಲು ಸಿದ್ದಗೊಂಡಿದೆ. 

ಪ್ರಮುಖ ಸೇವೆಗಳು
►ವಿಡಿಯೋ ಕರೆಗಳ ಮುಖೇನ ವೈದ್ಯರೊಂದಿಗೆ ಸಮಾಲೋಚನೆ
►1ರಿಂದ15 ಕಿಲೋ ಮೀಟರ್ ವ್ಯಾಪ್ತಿಗೊಳಪಟ್ಟು ಔಷದ ಪೂರೈಕೆ
►ಮನೆಯಲ್ಲಿಯೇ ಫಿಸಿಯೋಥೆರಫಿ, ಆಯುರ್ವೇದ, ಹೋಮಿಯೋಪಥಿ ಚಿಕಿತ್ಸೆ
►ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ತಪಾಸಣೆ ಮತ್ತು ಚಿಕಿತ್ಸೆ
►ತುರ್ತು ಸಂದರ್ಭದಲ್ಲಿ ಆಂಬುಲೆನ್ಸೆ ಸೇವೆ
►ಲ್ಯಾಬ್ ರಕ್ತದ ಮಾದರಿ ಸಂಗ್ರಹ ಮತ್ತು  ಆನ್ ಲೈನ್ ರಿಪೋರ್ಟ್
►ವೈದ್ಯಕೀಯ ಉಪಕರಣಗಳನ್ನು ಬಾಡಿಗೆಗೆ ನೀಡುವುದು
ಈ ಎಲ್ಲಾ ಸೇವೆಗಳನ್ನು ದಿನದ 24 ಗಂಟೆಗಳ ಅವಧಿಯಲ್ಲಿಯೂ ಪಡೆಯಲು ತಾವು ದೂರವಾಣಿ ಸಂಖ್ಯೆ 9686985055 ಅಥವಾ yenepoya.healzapp.com ವೆಬ್ ಸೈಟನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News