×
Ad

ಈದುಲ್ ಫಿತ್ರ್: ರವಿವಾರ ಇತರ ದಿನಗಳ ರಿಯಾಯಿತಿ ಮುಂದುವರಿಸಲು ವಿನಂತಿ

Update: 2020-05-22 18:19 IST

ಉಡುಪಿ, ಮೇ 22: ಈ ಬಾರಿ ಈದುಲ್ ಫಿತ್ರ್ ಹಬ್ಬ ರವಿವಾರ ( ಮೇ 24) ರಂದು ಆಗುವ ಸಾಧ್ಯತೆ ಹೆಚ್ಚಿದೆ. ಆದರೆ ರವಿವಾರ ಸಂಪೂರ್ಣ ಲಾಕ್ ಡೌನ್ ಇರಲಿದೆ ಎಂದು ಸರಕಾರ ಘೋಷಣೆ ಮಾಡಿರುವುದರಿಂದ ಅದೇ ದಿನ ಈದ್ ಬಂದರೆ ಈದ್ ಗೆ ಸಂಬಂಧಿಸಿ ಕನಿಷ್ಠ ಆಚರಣೆಗಳಿಗೆ ಹಾಗು ಸಮೀಪ ಸಂಬಂಧಿಗಳನ್ನು ಭೇಟಿಯಾಗಲು ಜನರಿಗೆ ಸಮಸ್ಯೆಯಾಗಲಿದೆ. ವಾರದ ಆರು ದಿನ ಇರುವಷ್ಟು ಜನಸಂಚಾರದ ಅವಕಾಶ ಈದ್ ದಿನ ಜನರಿಗೆ ಸಿಗಬೇಕು. 

ಆದ್ದರಿಂದ ಈ ರವಿವಾರ ವಾರದ ಇತರ ದಿನಗಳಲ್ಲಿ ಇರುವಷ್ಟು ರಿಯಾಯಿತಿಗಳನ್ನು ಮುಂದುವರಿಸಿ ಸಹಕರಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿಯವರನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಅವರು ವಿನಂತಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News