×
Ad

ರಮಝಾನ್ ಹಬ್ಬದಂದು ಲಾಕ್‌ಡೌನ್ ‌ಸಡಿಲಿಕೆ ಮಾಡುವಂತೆ ಡಿಸಿಗೆ ಮನವಿ

Update: 2020-05-22 18:44 IST

ಉಡುಪಿ, ಮೇ 22: ಈದುಲ್ ಫಿತ್ರ್(ರಂಝಾನ್) ಹಬ್ಬವು ಮೇ 24ರಂದು ರವಿವಾರ ಆಚರಿಸುವ ಸಾಧ್ಯತೆ ಇದ್ದು, ರಾಜ್ಯ ಸರಕಾರವು ಪ್ರತೀ ರವಿವಾರ ಪೂರ್ಣ ದಿನದ ಲಾಕ್‌ಡೌನ್ ಘೋಷಿಸಿದೆ. ಆದುದರಿಂದ ರವಿವಾರ ಹಬ್ಬವಾದಲ್ಲಿ ಪೂರ್ಣ ದಿನದ ಲಾಕ್‌ಡೌನ್ ಸಡಿಲಿಕೆಯ ಆದೇಶ ಹೊರಡಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ರವಿವಾರ ಹಬ್ಬವಾದಲ್ಲಿ ಮುಸ್ಲಿಮರು ಸಂಪೂರ್ಣ ಲಾಕ್‌ಡೌನ್ ನಿಂದಾಗಿ ಮನೆಯಿಂದ ಹೊರಗೆ ಬರಲಾಗದೆ ಸಂಕಷ್ಟವನ್ನು ಎದುರಿಸುವ ಸಾಧ್ಯತೆ ಇರುತ್ತದೆ. ರಮಝಾನ್ ಹಬ್ಬದಲ್ಲಿ ವಿಶೇಷ ಏನೆಂದರೆ ಸಮಸ್ತ ಮುಸ್ಲಿಮರು ತಮ್ಮ ಹಿರಿಯರು ಕುಟುಂಬಸ್ತರನ್ನು ಭೇಟಿ ಮಾಡಿ ಪರಸ್ಪರ ಶುಭ ಹಾರೈಸುತ್ತಾರೆ. ಇದಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಲಾಕ್‌ಡೌನ್ ಸಡಿಲಿಕೆ ಅಗತ್ಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮತ್ತು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನ್ಯಾಯವಾದಿ ಹಬೀಬ್ ಅಲಿ ಉಡುಪಿ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News