ಬಂಟ್ವಾಳ ಪೇಟೆಯ ಸೀಲ್ ಡೌನ್ ಪ್ರದೇಶದಲ್ಲಿ ಪ್ರತಿಭಟನೆ: 30ಕ್ಕೂ ಅಧಿಕ ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2020-05-22 15:36 GMT
ಫೈಲ್ ಚಿತ್ರ

ಬಂಟ್ವಾಳ: ತಾಲೂಕಿನ ಬಂಟ್ವಾಳ ಪೇಟೆಯ ಸೀಲ್ ಡೌನ್ ಪ್ರದೇಶದಲ್ಲಿ ಗುಂಪು ಸೇರಿ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಇಲ್ಲಿನ 30ಕ್ಕೂ ಅಧಿಕ ನಿವಾಸಿಗಳ ವಿರುದ್ದ ಬಂಟ್ವಾಳ‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೀಲ್ ಡೌನ್ ಏರಿಯಾದ ಇನ್ಸಿಡೆಂಟ್‌ ಕಮಾಂಡರ್, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ವಿಡಿಯೋ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತಿದೆ.

ಬಂಟ್ವಾಳ ಠಾಣಾಧಿಕಾರಿಯವರ ದೂರವಾಣಿ ಮಾಹಿತಿಯ ಹಿನ್ನೆಲೆಯಲ್ಲಿ ತಹಶೀಲ್ದಾರರು ಗುರುವಾರ ಅಪರಾಹ್ನ ಸುಮಾರು 12.00 ಗಂಟೆ ಸಮಯದಲ್ಲಿ ಪರಿಶೀಲಿಸಲು ಬಂಟ್ವಾಳ ಪೇಟೆಯ ಸ್ಥಳಕ್ಕೆ ಭೇಟಿ ನೀಡಿದಾಗ ಕಂಟೈನ್ ಮೆಂಟ್ ಝೋನ್ ಒಳಗೆ ಜನ ಗುಂಪು ಸೇರಿರುವುದು ಕಂಡು ಬಂದಿದೆ. ಕೋವಿಡ್ ಸಾಂಕ್ರಾಮಿಕ ಕಾಯಿಲೆಗೆ ಸಂಬಂಧಿಸಿದಂತೆ ಸದರಿ ಸೋಂಕು ಕಂಡು ಬಂದ ಬಂಟ್ವಾಳ ಪೇಟೆ ಪ್ರದೇಶದ ವ್ಯಾಪ್ತಿಯನ್ನು ಮೇ.9 ರಂದು ಕಂಟೈನ್ ಮೆಂಟ್ ಝೋನ್ ಎಂದು ಜಿಲ್ಲಾಧಿಕಾರಿಯವರು ಘೋಷಿಸಿದ್ದ ಅಧಿಸೂಚನೆಯನ್ನು ಇಲ್ಲಿ‌ ಸೇರಿದ್ದ ಮಂದಿ ಉಲ್ಲಂಘಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರು ಠಾಣೆಗೆ ನೀಡಿದ‌ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News