ಬೆಳ್ತಂಗಡಿಯ ಮಹಿಳೆಗೆ ಕೊರೋನ ಸೋಂಕು : ದ.ಕ.ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 63ಕ್ಕೇರಿಕೆ

Update: 2020-05-22 15:46 GMT

ಮಂಗಳೂರು, ಮೇ 22: ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಮತ್ತೊಂದು ಕೊರೋನ ಸೋಂಕು ಪ್ರಕರಣ ದೃಢಪಟ್ಟಿದೆ. ಈ ಮಧ್ಯೆ ಗುರುವಾರ ಆತ್ಮಹತ್ಯೆ ಮಾಡಿಕೊಂಡ ಕಡಂದಲೆಯ ಶಾಲೆಯೊಂದರ ಕ್ವಾರಂಟೈನ್‌ಲ್ಲಿದ್ದ 55ರ ಹರೆಯದ ವ್ಯಕ್ತಿಗೂ ಕೊರೋನ ಪಾಸಿಟಿವ್ ಬಂದಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 63ಕ್ಕೇರಿದೆ. ಆ ಪೈಕಿ ದ.ಕ.ಜಿಲ್ಲೆಯ 50, ಉತ್ತರ ಕನ್ನಡ 2, ಮುಂಬೈ 2, ಕಾರ್ಕಳ 3, ಕಲಬುರ್ಗಿ 1, ಕಾಸರಗೋಡು ಜಿಲ್ಲೆಯ 4 ಪ್ರಕರಣ ಸೇರಿದೆ.

ಮೇ 18ರಂದು ಮುಂಬೈಯ ಥಾಣೆ-ದೊಂಬಿವಿಲಿಯಿಂದ ಬಂದಿದ್ದ 29 ವರ್ಷ ಪ್ರಾಯದ ಮಹಿಳೆಗೆ ಸೋಂಕು ತಗುಲಿರುವುದು ಶುಕ್ರವಾರ ದೃಢಗೊಂಡಿವೆ. ಮುಂಬೈಯಿಂದ ಬಂದಿದ್ದ ಇವರು ಜಿಲ್ಲಾಡಳಿತ ವತಿಯಿಂದ ಸಿದ್ಧಪಡಿಸಲಾದ ಬೆಳ್ತಂಗಡಿಯ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಇವರ ಗಂಟಲಿನ ದ್ರವದ ಪರೀಕ್ಷೆ ನಡೆಸಿದಾಗ ಕೊರೋನ ವೈರಸ್ ಇರುವುದು ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News