ಉಡುಪಿ: ಮೇ 19ರಂದು ಕೊರೋನ ಪಾಸಿಟಿವ್ ಬಂದ ಚಿತ್ರದುರ್ಗದ ಬಾಲಕಿಯ ವರದಿ ಈಗ ನೆಗೆಟಿವ್

Update: 2020-05-22 16:10 GMT
ಸಾಂದರ್ಭಿಕ ಚಿತ್ರ

ಉಡುಪಿ, ಮೇ 22: ಮೇ 16ರಂದು ಚಿತ್ರದುರ್ಗದಿಂದ ಕ್ಯಾನ್ಸರ್ ಚಿಕಿತ್ಸೆಗೆಂದು ಮಣಿಪಾಲದ ಕೆಎಂಸಿಗೆ ಬಂದು ದಾಖಲಾದ 17ರ ಹರೆಯದ ಬಾಲಕಿಗೆ ನಡೆಸಲಾದ ಕೊರೋನ ಟೆಸ್ಟ್ ಮೇ 19ರಂದು ಪಾಸಿಟಿವ್ ಬಂದಿದ್ದು, ಇದೀಗ ನಡೆಸಿದ ಮರು ಪರೀಕ್ಷೆಯಲ್ಲಿ ಕೊರೋನಕ್ಕೆ ನೆಗೆಟಿವ್ ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಕೆಎಂಸಿಗೆ ದಾಖಲಾದಾಗ ಪಡೆದ ಆಕೆಯ ಗಂಟಲು ದ್ರವದ ಮಾದರಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಪಾಸಿಟಿವ್ ಎಂದು ಪ್ರಕಟಿಸಲಾಗಿತ್ತು. ಆ ಬಳಿಕ ಕೆಎಂಸಿಯಲ್ಲೇ ಪ್ರಾರಂಭಗೊಂಡ ಕೋವಿಡ್-19 ಪ್ರಯೋಗಾಲಯದಲ್ಲಿ 24 ಗಂಟೆಗಳ ಅಂತರದಲ್ಲಿ ಎರಡು ಬಾರಿ ನಡೆಸಿದ ಮರುಪರೀಕ್ಷೆಯಲ್ಲಿ ಕೊರೋನ ಸೋಂಕು ಪತ್ತೆಯಾಗಿರಲಿಲ್ಲ. ಹೀಗಾಗಿ ಎರಡು ಬಾರಿ ನಡೆಸಿದ ಪರೀಕ್ಷೆಯೂ ನೆಗೆಟಿವ್ ಆಗಿರುವುದರಿಂದ ಆಕೆಗೆ ಕೊರೋನ ನೆಗೆಟಿವ್ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಡಾ.ಸೂಡ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News