ಮಾಸ್ಕ್‌ಗಳ ಸಮರ್ಪಕ ವಿಲೇವಾರಿಗೆ ಸೂಚನೆ
Update: 2020-05-22 21:45 IST
ಉಡುಪಿ, ಮೇ 22: ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮನೆಗಳಲ್ಲಿ ಹಾಗೂ ಹೋಮ್ ಕ್ವಾರಂಟೈನ್ ಸಂದರ್ಭಗಳಲ್ಲಿ ಉಪಯೋಗಿಸಿದ ಮಾಸ್ಕ್ ಹಾಗೂ ಗ್ಲೌಸ್‌ಗಳನ್ನು ಮರು ಬಳಕೆ ಮಾಡದಂತೆ ಅವುಗಳನ್ನು ಕತ್ತರಿಸಿ, ಪೇಪರ್ ಬ್ಯಾಗ್‌ಗಳಲ್ಲಿ ಕನಿಷ್ಠ 72 ಗಂಟೆಗಳ ಕಾಲ ಶೇಖರಿಸಿ ನಂತರ ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಡಿಹೆಚ್‌ಓ ಡಾ. ಸುಧೀರ್‌ಚಂದ್ರ ಸೂಡಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.