​ಖಾಸಗಿ ಕ್ವಾರಂಟೈನ್ ನಿಲ್ಲಿಸುವಂತೆ ಕರವೇ ಆಗ್ರಹ

Update: 2020-05-22 16:16 GMT

ಹೆಬ್ರಿ, ಮೇ 22: ಹೆಬ್ರಿಯಲ್ಲಿ ಖಾಸಗಿ ಕ್ವಾರಂಟೈನ್‌ನಲ್ಲಿದ್ದ ಇಬ್ಬರು ಮಹಿಳೆ ಯರಿಗೆ ಕೊರೊನಾ ಪಾಸಿಟಿವ್ ದೃಡಪಟ್ಟ ಹಿನ್ನಲೆಯಲ್ಲಿ ಹೆಬ್ರಿ ಪರಿಸರದ ಜನತೆ ಆತಂಕಗೊಂಡಿದ್ದಾರೆ. ಖಾಸಗಿ ಕ್ವಾರಂಟೈನ್‌ನಲ್ಲಿ ಪೊಲೀಸ್ ಭದ್ರತೆ ಇಲ್ಲ. ಅಲ್ಲಿರುವವರು ಮನಬಂದಂತೆ ಇರುವ ಮಾಹಿತಿ ಇದ್ದು ಈ ಬಗ್ಗೆ ಕಠಿಣ ಕ್ರಮಕೈಗೊಂಡು ತನಿಖೆ ನಡೆಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ ಆಗ್ರಹಿಸಿದ್ದಾರೆ.

ಸರಕಾರಿ ಕ್ವಾರಂಟೈನ್‌ನಲ್ಲಿ ಭದ್ರತೆ, ಮೇಲುಸ್ತುವಾರಿ ಇರುತ್ತದೆ. ಆದರೆ ಖಾಸಗಿ ವಸತಿಗೃಹಗಳ ಕ್ವಾರಂಟೈನ್‌ನಲ್ಲಿ ಭದ್ರತೆ ಇಲ್ಲ. ಅಲ್ಲಿದ್ದವರು ಹೊರಗೆಲ್ಲಾ ತಿರುಗುತ್ತಿರುವ, ಮದ್ಯದಂಗಡಿ, ಹೋಟೆಲು, ಮನೆಗಳಿಗೂ ಹೋದ ಮಾಹಿತಿ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸುವಂತೆ ವಿಜೇಂದ್ರ ಶೆಟ್ಟಿ ಆಗ್ರಹಿಸಿದ್ದಾರೆ.

ಈವರೆಗೆ ಸ್ಥಳೀಯರಿಂದ ಕೊರೊನಾ ಸಮಸ್ಯೆಯಾಗಿಲ್ಲ. ಆದರೆ ಮುಂಬಯಿ ಸಹಿತ ಹೊರ ರಾಜ್ಯಗಳಿಂದ ಬಂದವರಿಂದಲೇ ಸಮಸ್ಯೆಯಾಗುತ್ತಿದೆ. ಇನ್ನು ಹೊರ ರಾಜ್ಯಗಳಿಂದ ಬರುವವರಿಗೆ ಕಡ್ಡಾಯವಾಗಿ 28 ದಿನಗಳ ಸರಕಾರಿ ಕ್ವಾರಂಟೈನ್ ಮಾಬೇಕು ಎಂದವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News